

ಮೇಷ: ಅಭಿಮಾನದಿಂದ ವರ್ತಿಸಿ. ಹಿರಿಯರ ಸಲಹೆ ಪಡೆಯಿರಿ. ಮಕ್ಕಳ ಭವಿಷ್ಯದ ಚಿಂತೆ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ: 9
ವೃಷಭ: ಬಹುದಿನಗಳಿಂದ ಕಾಡುತ್ತಿದ್ದ ಆಸ್ತಿವಿವಾದ ಅಂತ್ಯ. ಹಿತಶತ್ರುಗಳಿಂದ ಅಪಪ್ರಚಾರ. ವ್ಯಾಪಾರಸ್ಥರಿಗೆ ವಿಶೇಷ ಧನಲಾಭ. ಶುಭಸಂಖ್ಯೆ: 8
ಮಿಥುನ: ಅನವಶ್ಯಕ ವಿಷಯಗಳಿಂದ ದೂರ ಇದ್ದರೆ ಒಳ್ಳೆಯದು. ನಿರುದ್ಯೋಗಿಗಳಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 2
ಕಟಕ: ಕಚೇರಿಯಲ್ಲಿ ನಿಮ್ಮ ಮೇಲೆ ದೂರು ಹೇಳುವರು. ಮಗನಿಗೆ ವಿವಾಹ ನಿಶ್ಚಯ. ದಿನಾಂತ್ಯದಲ್ಲಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 5
ಸಿಂಹ: ಹಲವು ದಿನಗಳಿಂದ ಬಾಧಿಸುತ್ತಿದ್ದ ವ್ಯಾದಿ ಉಪಶಮನ. ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರಿ. ಶುಭಸಂಖ್ಯೆ: 3
ಕನ್ಯಾ: ಸಂಗಾತಿಯ ಸಲಹೆಗೆ ಪ್ರಾಶಸ್ತ್ಯ ಕೊಡಿ. ನಿರ್ಲಕ್ಷಿಸಬೇಡಿ. ಮಗನ ವಿದ್ಯಾಭ್ಯಾಸದಲ್ಲಿ ಪ್ರಗತಿ. ಅನಾರೋಗ್ಯ ಕಾಡುತ್ತದೆ. ಶುಭಸಂಖ್ಯೆ: 7
ತುಲಾ: ಮಿತ್ರರೇ ಶತ್ರುಗಳಂತೆ ವರ್ತಿಸುತ್ತಾರೆ. ನೀವು ಮಾತ್ರ ತಾಳ್ಮೆಯಿಂದ ವರ್ತಿಸಿ. ಕುಟುಂಬದಲ್ಲಿ ಮಹತ್ವದ ತೀರ್ವನ. ಶುಭಸಂಖ್ಯೆ: 6
ವೃಶ್ಚಿಕ: ಪಿತ್ರಾರ್ಜಿತ ಆಸ್ತಿಯಿಂದ ವಿಶೇಷ ಧನಲಾಭ. ಅನಾರೋಗ್ಯ ಕಾಡಬಹುದು. ದಿನಾಂತ್ಯದಲ್ಲಿ ಅಶುಭವಾರ್ತೆ ಬಂದೀತು. ಶುಭಸಂಖ್ಯೆ: 3
ಧನುಸ್ಸು: ಪರಿಶ್ರಮಕ್ಕೆ ಪ್ರತಿಫಲ ಸಿಗದೇ ಇರಬಹುದು. ನಿರಾಶರಾಗಬೇಡಿ. ನಿರ್ಧಾರ ತೆಗೆದುಕೊಳ್ಳಬೇಕಾದರೆ ನೂರು ಬಾರಿ ಯೋಚಿಸಿ. ಶುಭಸಂಖ್ಯೆ: 1
ಮಕರ: ಕಹಿ ಘಟನೆಗಳಿಗೆ ನೀವು ಸಾಕ್ಷಿಯಾಗಲಿದ್ದಾರೆ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಹಿರಿಯರ ಮಾತಿಗೆ ಬೆಲೆ ಕೊಡಿ. ಶುಭಸಂಖ್ಯೆ: 9
ಕುಂಭ: ನಿಮ್ಮ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಸಲಹೆ ನೀಡಿ. ಉದ್ಯೋಗ ವ್ಯಾಪಾರದಲ್ಲಿ ಅನಿರೀಕ್ಷಿತವಾಗಿ ಸಹಾಯ ಧನ ಲಭಿಸಲಿದೆ. ಶುಭಸಂಖ್ಯೆ: 7
ಮೀನ: ಪ್ರಾಮಾಣಿಕರಂತೆ ನಟಿಸುವ ಮೋಸಗಾರರ ಬಗ್ಗೆ ಎಚ್ಚರ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಖಾಸಗಿ ಉದ್ಯೋಗಿಗಳಿಗೆ ಭೀತಿ. ಶುಭಸಂಖ್ಯೆ: 3