

ಮೇಷ: ಮಾನಸಿಕ ಒತ್ತಡ. ಪಾಲುದಾರಿಕೆಯ ಮಾತುಕತೆ. ಅತಿಯಾದ ಭಯ. ಧನ ಲಾಭ. ಇಷ್ಟ ವಸ್ತುಗಳನ್ನು ಖರೀದಿ ಮಾಡುವಿರಿ. ಶುಭಸಂಖ್ಯೆ: 9
ವೃಷಭ: ಹಣ ಬಂದರೂ ಉಳಿಯುವುದಿಲ್ಲ. ದೃಷ್ಟಿ ದೋಷದಿಂದ ತೊಂದರೆ. ಕೋಪ ಜಾಸ್ತಿ. ಅತಿಯಾದ ನಿದ್ರೆ ಆಲಸ್ಯಕ್ಕೆ ಕಾರಣವಾದೀತು. ಶುಭಸಂಖ್ಯೆ: 7
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಜಯ. ಬೇಡದ ವಿಷಯಗಳಲ್ಲಿ ಆಸಕ್ತಿ. ದುಡುಕು ಸ್ವಭಾವ. ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 1
ಕಟಕ: ಅನಿರೀಕ್ಷಿತ ಪ್ರಯಾಣ. ಯತ್ನ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಸಜ್ಜನ ವಿರೋಧ ಒಳ್ಳೆಯದಲ್ಲ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 5
ಸಿಂಹ: ಕುಟುಂಬದಲ್ಲಿ ಪ್ರೀತಿ. ನಾನಾ ವಿಚಾರಗಳಲ್ಲಿ ಆಸಕ್ತಿ. ಭಾಗ್ಯವೃದ್ದಿ. ದೈವಿಕ ಚಿಂತನೆ. ಮನಸ್ಸಿನಲ್ಲಿ ಗೊಂದಲ ಮೂಡಬಹುದು. ಶುಭಸಂಖ್ಯೆ: 7
ಕನ್ಯಾ: ಮಾತಿನಿಂದ ಕಲಹವಾದೀತು. ದ್ರವ್ಯ ಲಾಭ. ರೋಗಬಾಧೆ. ಸ್ವಯಂಕೃತ ಅಪರಾಧದಿಂದ ತೊಂದರೆ.ವಾಹನ ರಿಪೇರಿ. ಶುಭಸಂಖ್ಯೆ:2
ತುಲಾ: ಹಿತಶತ್ರುಗಳಿಂದ ಕಿರಿಕಿರಿ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ವ್ಯಾಪಾರದಲ್ಲಿ ಮಂದಗತಿ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 7
ವೃಶ್ಚಿಕ: ಒತ್ತಡ ಅದೆಷ್ಟೇ ಇದ್ದರೂ ವಿವೇಚನೆ ಕಳೆದು ಕೊಳ್ಳಬೇಡಿ. ಅಪರಿಚಿತರ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಜಾಗ್ರತೆಯಿಂದಿರಿ. ಶುಭಸಂಖ್ಯೆ: 9
ಧನುಸ್ಸು: ಅನವಶ್ಯಕ ದುಂದು ವೆಚ್ಚ. ಪರಸ್ತ್ರೀಯಿಂದ ತೊಂದರೆ. ಅಪವಾದ, ನಿಂದನೆ ಅನುಭವಿಸಬೇಕಾದೀತು. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 1
ಮಕರ: ಯತ್ನ ಕಾರ್ಯಗಳಲ್ಲಿ ಜಯ. ಕೃಷಿಯಲ್ಲಿ ಲಾಭ. ಉದ್ಯೋಗದಲ್ಲಿ ಕಿರಿಕಿರಿ. ಯಾರನ್ನೂ ನಂಬಬೇಡಿ. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 4
ಕುಂಭ: ಮಿತ್ರರಿಂದ ಸಹಾಯ. ಆಂತರಿಕ ಕಲಹ. ಸ್ಥಿರಾಸ್ತಿ ಪ್ರಾಪ್ತಿ. ಮನಃಶಾಂತಿ ಲಭಿಸುವುದು. ಪ್ರತಿಷ್ಠಿತ ಜನರ ಪರಿಚಯವಾಗಲಿದೆ. ಶುಭಸಂಖ್ಯೆ: 3
ಮೀನ: ಪ್ರಿಯ ಜನರ ಭೇಟಿ, ಅತಿ ಬುದ್ಧಿವಂತಿಕೆ ತೋರಿಸುವಿರಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಬಾಕಿ ವಸೂಲಿ. ಸಂತಸದ ಕ್ಷಣಗಳು. ಶುಭಸಂಖ್ಯೆ: 6