

ಚಾಮರಾಜನಗರ: ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಜಿಲ್ಲೆಗೆ ಕಂಚಿನ ಪದಕ ಒಲಿದು ಬಂದಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿರುವ ತಾಲೂಕಿನ ಕೋಡಿಮೋಳೆ ಗ್ರಾಮದ ನಿವಾಸಿ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವನಂಜಶೆಟ್ಟಿ ಜಾವಲಿನ್ ಥ್ರೋನಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಸೆ.17ರಂದು 200 ಮೀಟರ್ ಓಟದ ಸ್ಪರ್ಧೆ ಇದ್ದು, ಇದರಲ್ಲಿ ಶಿವನಂಜಶೆಟ್ಟಿ ಭಾಗವಹಿಸಲಿದ್ದಾರೆ.