ಇಡಿ ದಾಳಿಗೆ ಸಂಸದರು ಕಾರಣವೆಂಬ ಡಿಸಿಸಿ ಅಧ್ಯಕ್ಷರ ಹೇಳಿಕೆಗೆ ಖಂಡನೆ/ಉಪ್ಪು ತಿಂದವರು ನೀರು ಕುಡಿಯಲೇಬೇಕು/ಸಂಸದ ಮುನಿಸ್ವಾಮಿ ತಿರುಗೇಟು

Published on

ವಿಜಯವಾಣಿನ ಸುದ್ದಿಜಾಲ ಕೋಲಾರ
ಶಾಸಕ ಕೆ.ವೈ.ನಂಜೇಗೌಡರ ನಿವಾಸದ ಮೇಲಿನ ಇಡಿ ದಾಳಿಗೆ ನಾನು ಕಾರಣ ಎಂಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳಿಗೆ ಅರ್ಥವಿಲ್ಲ, ನನಗೂ ಅದಕ್ಕೂ ಸಂಬAಧವಿಲ್ಲ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ೧೫೦ ಕೋಟಿ ಮೌಲ್ಯದ ಸರ್ಕಾರಿ ಭೂಮಿ ಹಂಚಿಕೆ ಸಂಬAಧ ಈ ದಾಳಿ ನಡೆದಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಸ್ಪಷ್ಟಪಡಿಸಿದರು.

ನಗರ ಹೊರವಲಯದ ಅರಾಭಿಕೊತ್ತನೂರು ಸಮೀಪ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಡಿ ದಾಳಿಯನ್ನು ನಾನು ಮಾಡಿಸಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ನೀಡಿರುವ ಬಾಲಿಷ ಹೇಳಿಕೆ ಕುರಿತು ಕಿಡಿಕಾರಿದರು. ಜಾರಿ ನಿರ್ದೇಶನಾಲಯ ಯಾವುದೇ ಶಾಸಕರು, ಸಂಸದರ ಶಿಫಾರಸ್ಸಿನಂತೆ ಕೆಲಸ ಮಾಡಲ್ಲ ಎಂಬ ಸತ್ಯ ತಿಳಿದುಕೊಳ್ಳಿ ಎಂದರು.

ಇದೀಗ ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಆರೋಪಗಳ ಪಟ್ಟಿಯಲ್ಲಿ ತಿಳಿಸಿರುವಂತೆ ಕೇವಲ ಒಂದು ತಿಂಗಳಲ್ಲಿ ೧೫ ಎಕರೆ ಸರ್ಕಾರಿ ಜಮೀನಿನಲ್ಲಿ ೮೦ ಎಕರೆ ಜಮೀನನ್ನು ಕೇವಲ ಒಂದೇ ತಿಂಗಳಲ್ಲಿ ದರಖಾಸ್ತು ಸಮಿತಿಯ ೪ ಸಭೆ ನಡೆಸಿ ಹಂಚಿಕೆ ಮಾಡಲಾಗಿದೆ ಈ ಕುರಿತು ಮಾಸ್ತಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಅದರಂತೆ ಈ ದಾಳಿ ನಡೆದಿದೆ ಎಂದರು.

ದರಖಾಸ್ತು ಸಮಿತಿ ಅಧ್ಯಕ್ಷರೂ ಆಗಿರುವ ಮಾಲೂರು ಶಾಸಕರ ವಿರುದ್ದ ಸರ್ಕಾರಿ ಜಮೀನು ಹಂಚಿಕೆ ಸಂಬAಧ ಶಾಸಕರು,ತಹಸೀಲ್ದಾರ್ ಇಬ್ಬರ ವಿರುದ್ದವೂ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಮಾಸ್ತಿ ಠಾಣೆಯಲ್ಲಿನ ದೂರು ಆಧರಿಸಿ ಇ.ಡಿ ಅಧಿಕಾರಿಗಳ ದಾಳಿ ನಡೆದಿದೆ ಎಂಬುದು ಇಡಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿಯೇ ಸ್ಪಷ್ಟವಾಗಿದೆ ಎಂದರು.

ಕೋಲಾರ ಹಾಲು ಒಕ್ಕೂಟದ ನೇಮಕಾತಿ ಹಗರಣವೂ ಇದಕ್ಕೆ ಕಾರಣವಾಗಿದೆ, ಲಕ್ಷಾಂತರ ರೂ ಪಡೆದು ೭೩ ಮಂದಿಗೆ ಉದ್ಯೋಗ ನೀಡಿರುವ ಇವರು ಅಷ್ಟೆ ಸಂಖ್ಯೆಯ ಪ್ರತಿಭಾನ್ವಿತರಿಗೆ ವಂಚನೆ ಮಾಡಿದ್ದರು ಈ ಆರೋಪವೂ ಈ ದಾಳಿಗೆಕಾರಣವಾಗಿದೆ ಎಂದರು.

ಪ್ರತಿ ಉದ್ಯೋಗಕ್ಕೆ ೨೦ ರಿಂದ ೩೦ ಲಕ್ಷ ರುಪಾಯಿ ಲಂಚ ಪಡೆದಿರುವ ಆರೋಪ ಕೇಳಿ ಬಂದಿತ್ತು. ಈ ನಡುವೆ ಸಂದರ್ಶನದ ಪ್ರಕ್ರಿಯೆ ದುರ್ಬಳಕೆ ಮಾಡಿಕೊಂಡಿರುವ ಮಾಹಿತಿ ಇ.ಡಿಗೆ ಲಭ್ಯವಾಗಿದೆ ಎಂದು ತಿಳಿಸಲಾಗಿದೆ,ಒಕ್ಕೂಟದ ಅಧ್ಯಕ್ಷ ಕೆವೈ ನಂಜೇಗೌಡ ಸೇರಿದಂತೆ ನಾಲ್ಕು ಮಂದಿ ಸದಸ್ಯರ ವಿರುದ್ದವೂ ಆರೋಪವಿದ್ದು, ಉಪ್ಪು ಕುಡಿದವರು ನೀರು ಕುಡಿಯಬೇಕು, ತಪ್ಪು ಮಾಡದಿದ್ದರೆ ಭಯವೇಕೆ ಎಂದು ಪ್ರಶ್ನಿಸಿದರು.
ನೇಮಕಾತಿ ಪರೀಕ್ಷೆ ಬರೆದಿದ್ದ ಪ್ರಾಮಾಣಿಕರಿಗೆ ಅನ್ಯಾಯವಾಗಿದೆ, ಇದು ಸಾರ್ವಜನಿಕವಾಗಿ ಕೇಳಿ ಬಂದಿರುವ ಆರೋಪವಾಗಿದೆ, ಕೋಚಿಮುಲ್ ಸಿಬ್ಬಂದಿ ನಾಗೇಶ್ ಎಂಬುವವರೇ ಈ ಸಂಬAಧ ದೂರು ನೀಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬAಧವಿಲ್ಲ ಎಂದರು.

ಇಡಿ ದಾಳಿ ವೇಳೆ ಇ.ಡಿ ಶೋಧದ ವೇಳೆ ಕೆವೈ.ನಂಜೇಗೌಡರಿಗೆ ಸೇರಿದ್ದ ೨೫ ಲಕ್ಷಕ್ಕೂ ಹೆಚ್ಚು ನಗದು ಜಪ್ತಿ ಮಾಡಲಾಗಿದೆ, ೫೦ ಕೋಟಿ ರೂಪಾಯಿ ಹೆಚ್ಚು ಮೌಲ್ಯದ ಚರಾಸ್ತಿ, ಸಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ, ಈ ನಡುವೆ ವಿವಿಧ ಆರೋಪದ ದಾಖಲೆಗಳು ಡಜಿಟಲ್ ಡೇಟಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾರಾಯಣಶೆಟ್ಟಿ, ಅಪ್ಪಿಗೌಡ ಮತ್ತಿತರರಿದ್ದರು.

ಚಿತ್ರ೧೨ ಕೆ. ಎಲ್.ಆರ್‌೦೧ಕೋಲಾರ ಹೊರವಲಯದಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ ನಂಜೇಗೌಡರ ಮೇಲಿನ ಇಡಿ ದಾಳಿಗೆ ನಾನು ಕಾರಣವೆಂಬ ಡಿಸಿಸಿ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net