ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ನಿರ್ಲಕ್ಷೃ

26 nrp 1 kannada
ಎನ್.ಆರ್.ಪುರದ ಸುವರ್ಣವನದಲ್ಲಿ ಏರ್ಪಡಿಸಿದ್ದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ನವೀನ್‌ಕುಮಾರ್, ಶೆಟ್ಟಿಕೊಪ್ಪ ಜೋಯಿ ಹಾಗೂ ನಂದೀಶ್ ಅವರನ್ನು ಸನ್ಮಾನಿಸಲಾಯಿತು. ಎಚ್.ಎಸ್.ಪೂರ್ಣೇಶ್, ಡಾ. ವಿಜಯಕುಮಾರ್, ಡಾ.ಆಕರ್ಷ್, ಎಂ.ಪಿ.ಆದರ್ಶ, ಕೆ.ಎಸ್.ರಾಜಕುಮಾರ್, ಗೌಸ್‌ಮೊಹಿಯುದ್ದೀನ್, ನಂದಿನಿ ಆಲಂದೂರು ಇದ್ದರು.
Published on

ಎನ್.ಆರ್.ಪುರ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಕನ್ನಡ ಭಾಷೆ ನಿರ್ಲಕ್ಷೃ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ಹೇಳಿದರು.

ತಾಲೂಕಿನ ಸೌತಿಕೆರೆಯ ಸುವರ್ಣವನದಲ್ಲಿ ತಾಲೂಕು ಕಸಾಪ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂಗ್ಲಿಷ್ ಶ್ರೇಷ್ಠ ಎಂಬ ಭಾವನೆ ಸರಿಯಲ್ಲ. ಕನ್ನಡ ನಮ್ಮ ಜೀವನದ, ಬದುಕಿನ ಭಾಷೆಯಾಗಿದೆ. ಕನ್ನಡ ತನ್ನದೇ ಆದ ಶ್ರೇಷ್ಠತೆ, ಘನತೆ ಹೊಂದಿದೆ. ಕನ್ನಡದವರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಬೇರೆ ಭಾಷೆಯನ್ನು ಗೌರವಿಸಿ, ಕನ್ನಡವನ್ನು ಹೃದಯದಿಂದ ಪ್ರೀತಿಸಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿಜಯಕುಮಾರ್ ಮಾತನಾಡಿ, ಪ್ರಸ್ತುತ ಒತ್ತಡದ ಜೀವನದಿಂದ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಬರುತ್ತಿವೆ. ಉತ್ತಮ ಆಹಾರ ಸೇವಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಎಲ್ಲ ಇಲಾಖೆಯವರೂ ಒಗ್ಗೂಡಿ ಕನ್ನಡದ ತೇರನ್ನು ಎಳೆಯಬೇಕು. ಮುಂದಿನ ದಿನಗಳಲ್ಲಿ ಪರಿಸರ ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಗೌಸ್‌ಮೊಹಿಯುದ್ದೀನ್, ಬರಹಗಾರ ನವೀನ್‌ಕುಮಾರ್, ನಂದೀಶ್, ಶೆಟ್ಟಿಕೊಪ್ಪ ಜೋಯಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಕೋಶಾಧಿಕಾರಿ ಕೆ.ಎಸ್.ರಾಜಕುಮಾರ್, ಅಗ್ನಿಶಾಮಕದಳದ ಸಿಬ್ಬಂದಿ ಸಂತೋಷ್, ಆರೋಗ್ಯ ಇಲಾಖೆಯ ಡಾ.ಆಕರ್ಷ್, ತಾಲೂಕು ಕಸಾಪ ಕಾರ್ಯದರ್ಶಿ ನಂದಿನಿ ಆಲಂದೂರು, ಅಗ್ನಿಶಾಮಕದಳದ ಸಿಬ್ಬಂದಿ ದೇವೇಂದ್ರನಾಯ್ಕ, ಅರಣ್ಯ ಇಲಾಖೆಯ ಪಿ.ಮಂಜಯ್ಯ, ಎಂ.ಪಿ.ಮನು, ಹಿರಿಯ ಆರೋಗ್ಯ ನಿರೀಕ್ಷಕ ದರ್ಶನಾಥ್, ಪವನ್‌ಕರ್, ಶೆಟ್ಟಿಕೊಪ್ಪ ಜೋಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net