ಇ-ತ್ಯಾಜ್ಯ ನಿವಾರಣೆ

14.Pyp.01
Published on

ಪಿರಿಯಾಪಟ್ಟಣ: ಪರಿಸರ ಮಾಲಿನ್ಯದಂತಹ ಗಂಭೀರ ಸಮಸ್ಯೆಗೆ ಕಾರಣವಾಗಿರುವ ಅನಗತ್ಯ ಇ-ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಸಮಸ್ಯೆ ನಿವಾರಣೆಗಾಗಿ ಲಯನ್ಸ್ ಸಂಸ್ಥೆ ವತಿಯಿಂದ ಇ-ತ್ಯಾಜ್ಯ ನಿವಾರಣೆ ರಾಷ್ಟ್ರೀಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಎ.ಮಹದೇವಪ್ಪ ತಿಳಿಸಿದರು.
ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇ- ತ್ಯಾಜ್ಯ ಸಂಗ್ರಹಣೆ ಸಂಬಂಧ ಪ್ರಚಾರ ನಡೆಸಿದರು. ದೇಶದಲ್ಲಿ ಇ-ತ್ಯಾಜ್ಯದಿಂದಾಗಿ ಭೂಮಿ, ವಾಯು, ಜಲ ಮಾಲಿನ್ಯ ಹೆಚ್ಚುತ್ತಿರುವುದನ್ನು ಮನಗಂಡು ಸಂಸ್ಥೆ ಒಂದು ತಿಂಗಳು ಈ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನುಪಯುಕ್ತ ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಉಪಕರಣ ಸೇರಿದಂತೆ ಒಟ್ಟು 245 ಕೆ.ಜಿ. ವಸ್ತುಗಳನ್ನು ಸಂಗ್ರಹಿಸಲಾಯಿತು. ಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಗಿರೀಶ್, ಮಂಜುನಾಥ್ ಸಿಂಗ್, ವಿನೋದ್ ಕುಮಾರ್, ಲವಕುಮಾರ್, ಕುಮಾರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net