ಆಸಂಗಿಯಲ್ಲಿ ಸಂಭ್ರಮದ ಹಾಲೋಕಳಿ

A wave of celebration in Asangi
A wave of celebration in Asangi
Published on

ರಬಕವಿ/ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದಲ್ಲಿ ಹನುಮಾನ ದೇವರ ಹಾಗೂ ಲಕ್ಕವ್ವ ದೇವಿ ಜಾತ್ರೆ ಅಂಗವಾಗಿ ಭಾನುವಾರ ಗ್ರಾಮೀಣ ಪರಂಪರೆ ಬಿಂಬಿಸುವ ಸಂಭ್ರಮದ ಹಾಲೋಕಳಿ ಕಾರ್ಯಕ್ರಮ ಜರುಗಿತು.

ಹಾಲಗಂಬ ಏರಲು ಅನೇಕ ಯುವಕರು ಹರಸಹಾಸ ಮಾಡಿದರು. ಇವರು ಹಾಲಗಂಬ ಏರುತ್ತಿದ್ದಂತೆ ಮೇಲೆ ಕುಳಿತವರೊಬ್ಬರು ಹಾಲಗಂಬ ಜಾರಲೆಂದೇ ಹಾಲು, ತುಪ್ಪ, ಬಾಳೆಹಣ್ಣಿನ ರಸ ಸೇರಿದಂತೆ ಇನ್ನಿತರ ಜಾರುವ ಪದಾರ್ಥಗಳನ್ನು ಎರಚಿದರು. ಇವೆಲ್ಲದರ ನಡುವೆ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು.

ಮುಖಂಡರಾದ ತವನಪ್ಪ ಕೋರಿ, ಎಚ್.ಆರ್. ಪಟವರ್ಧನ, ದೋಂಡಿಬಾ ಗಾಯಕವಾಡ, ಬಸವರಾಜ ಖೇಮನ್ನವರ, ಲಕ್ಕಪ್ಪ ಶಿರಹಟ್ಟಿ, ರಾಜು ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net