ಆಭರಣ ಕಳವು, ಬಾಲಕ ವಶ

IMG-20221215-WA0024.jpg
Published on
ದಾವಣಗೆರೆ: ಕಲ್ಯಾಣಮಂಟಪದಲ್ಲಿ ಒಡವೆ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಾಲಕರ ಬಾಲಮಂದಿರ ವಶಕ್ಕೆ ಒಪ್ಪಿಸಿದ್ದು, ಕಳವು ಮಾಲು ವಶಪಡಿಸಿಕೊಳ್ಳಲಾಗಿದೆ. ಡಿ.14ರಂದು ಇಲ್ಲಿನ ಬಾಪೂಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮದುವೆ ವೇಳೆ ಬ್ಯಾಗ್‌ನಲ್ಲಿದ್ದ 1.85 ಲಕ್ಷ ರೂ. ಮೌಲ್ಯದ 37 ಗ್ರಾಂ ತೂಕದ ಚಿನ್ನದ ಒಡವೆ ಕಳ್ಳತನವಾಗಿದ್ದು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಕೆಟಿಜೆ ನಗರ ವೃತ್ತದ ಸಿಪಿಐ ಯು.ಜೆ.ಶಶಿಧರ್, ತನಿಖಾಧಿಕಾರಿ ಪ್ರವೀಣ್ ಪಾಲೇಕರ್, ವಿದ್ಯಾನಗರ ಠಾಣೆ ಪಿಎಸ್‌ಐ ಜಿ.ಎಂ.ರೇಣುಕಾ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net