ಆನ್‌ಲೈನ್ ವಂಚನೆ,ದುರ್ಗದಲ್ಲಿ 45 ಮ್ಯೂಲ್ ಆಕೌಂಟ್‌ಗಳ ಗುರುತು?

cybe crime
Published on

ಚಿತ್ರದುರ್ಗ:ಆನ್‌ಲೈನ್ ವಂಚನೆ ಕುರಿತಂತೆ ಎಷ್ಟೇ ಜನರನ್ನು ಎಚ್ಚರಿಸಿದರು,ಯಾವುದೋ ಆಮಿಷಕ್ಕೆ ಒಳಗಾಗಿ ಜನರು ಪದೆ ಪದೇ ಮೋಸ ಹೋಗುವುದು ನಡೆದೇ ಇದೆ.
ಮೊಳಕಾಲ್ಮೂರು ತಾಲೂಕಿನ ಇಂಜಿನಿಯರ್ ಒಬ್ಬ ಕಮಿಷನ್ ಆಸೆಯಿಂದ ವಂಚಕರ ಬಲೆಗೆ ಬಿದ್ದು 8.60 ಲಕ್ಷ ರೂ.ಕಳೆದು ಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಚಿತ್ರದುರ್ಗ ಸಿಇಎನ್ ಪೊಲೀಸರು ತನಿಖೆ ಮುಂದು ವರಿಸಿದ್ದಾರೆ.
ಇಂಜಿನಿಯರ್‌ಗೆ ನೀಡಿದ್ದ ಟಾಸ್ಕ್
ಜ.5ರಿಂದ 9 ಅವಧಿಯೊಳಗೆ ಹಣವನ್ನು ಕಳೆದುಕೊಂಡಿರುವ ಇಂಜಿನಿಯರ್ ಅಂತಿಮವಾಗಿ 16ರಂದು ಪೊಲೀಸರ ಮೊರೆ ಹೋಗಿ ದ್ದು,ಕಳೆದುಕೊಂಡಿರುವ ಹಣದಲ್ಲಿ ಕನಿಷ್ಠ ಶೇ.50ನ್ನಾದರೂ ಪತ್ತೆ ಹಚ್ಚಿ,ಹಿಂತಿರುಗಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಾರಾಟ ಅಥವಾ ಖರೀದಿ ಟಾಸ್ಕ್‌ನ್ನು ಕೊಟ್ಟಿದ್ದ ವಂಚಕರು ಆರಂಭದಲ್ಲಿ ಒಂದಿಷ್ಟು ಕಮಿಷನ್‌ನನ್ನು ಇಂಜಿನಿಯರ್‌ಗೆ ಕೊಟ್ಟಿದ್ದು, ಇದರಿಂದಾಗಿ ವಂಚಕರ ಮಾತನ್ನು ನಂಬಿದ ಇಂಜಿನಿಯರ್ ಹಣ ಕಳೆದುಕೊಂಡಿದ್ದಾನೆ.
ಮ್ಯೂಲ್ ಬ್ಯಾಂಕ್ ಆಕೌಂಟ್
ಈ ರೀತಿ ವಂಚನೆ ಆದ ಸಂದರ್ಭದಲ್ಲಿ ನೊಂದವರು 1930 ಸಹಾಯವಾಣಿ ಅನೇಕ ಕರೆಗಳು ಕೂಡ ಕರೆ ಮಾಡುತ್ತಿದ್ದು,ಪೊಲೀಸ ರು ರಾಜ್ಯದಲ್ಲಿ ಸಾವಿರಾರು ಮ್ಯೂಲ್(ಞ್ಠ್ಝಛಿ)ಆಕೌಂಟ್‌ಗಳನ್ನು ಗುರುತಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸದ್ಯಕ್ಕೆ 45 ಬ್ಯಾಂಕ್ ಆಕೌಂ ಟ್‌ಗಳನ್ನು ಗುರುತಿಸಿದ್ದಾರೆಂದು ಹೇಳಲಾಗಿದೆ.
ನಾಲ್ಕು ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಜಮಾ
ಮೊಳಕಾಲ್ಮೂರು ಇಂಜಿನಿಯರ್‌ಗೆ ಆದ ವಂಚನೆ ಪ್ರಕರಣದಲ್ಲಿ ಆಸ್ಸಾಂ 2,ಆಂಧ್ರಪ್ರದೇಶ,ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿದ್ದ ತಲಾ ಒಂದೊಂದು ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಈಗ ಈ ಖಾತೆಗಳನ್ನು ಫ್ರೀಜ್ ಮಾಡಿಸಲು ಮುಂದಾಗಿದ್ದಾರೆ.
ಎಚ್ಚರವಿರಬೇಕು
ಹಲವರು ಆನ್‌ಲೈನ್ ಜೂಜಾಟದಲ್ಲಿ ಹಣಗಳಿಸಬಹುದು. ಆದರೆ ಹೀಗೆ ಜೂಜಾಟದಲ್ಲಿ ಹಣ ಬಂದಿದೆ ಎಂದು ನೆಮ್ಮದಿಯಿಂದ ಖರ್ಚು ಮಾಡುವಂತಿಲ್ಲ. ಯಾಕೆಂದರೆ ಕೆಲವು ಜೂಜಾಟಗಳಲ್ಲಿ ಹಣಗಳಿಸುವ ವ್ಯಕ್ತಿಗೆ, ವಂಚನೆ ಪ್ರಕರಣಗಳಲ್ಲಿ ಗಳಿಸಿದ ಮೊತ್ತದಲ್ಲಿ ಒಂದಿಷ್ಟು ಹಣ ಜೂಜುಕೋರರಿಗೆ ಜಮಾ ಆಗಿರುತ್ತದೆ ಎನ್ನುತ್ತಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net