ಆನ್‌ಲೈನ್ ವಂಚನೆಗೆ ೬.೫೮ ಲಕ್ಷ ಕಳೆದುಕೊಂಡ ಉದ್ಯಮಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ:
ನಗರದ ವ್ಯಕ್ತಿಯೊಬ್ಬರು ಆನ್‌ಲೈನ್ ವಂಚನೆಗೆ ಒಳಗಾಗಿ ೬.೫೮ ಲಕ್ಷ ಕಳೆದುಕೊಂಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಉದ್ಯಮಿ ಕೆ.ಎ.ಚಾಮರಾಜು ವಂಚನೆಗೆ ಒಳಗಾದ ವ್ಯಕ್ತಿ.

ಯೂನಿಯನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಅವರ ಮೊಬೈಲ್ ಸಂಖ್ಯೆಗೆ ೮ ನೇ ತಾರೀಖು ಬ್ಯಾಂಕ್ ಹೆಸರಿನಲ್ಲಿ ವಾಟ್ಸಾಪ್‌ಗೆ ಸಂದೇಶದ ಲಿಂಕ್ ಬಂದಿದ್ದು, ಓಪನ್ ಮಾಡಿದ್ದಾರೆ. ೧೦ನೇ ತಾರೀಖು ಸಂದೇಶದ ಹಾಗೂ ಓಟಿಪಿ ಲಿಂಕ್ ಮೆಸೇಜ್ ೩ ಬಾರಿ ಬಂದಿರುವ ಬಗ್ಗೆ ಬ್ಯಾಂಕ್‌ಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಖಾತೆಯನ್ನು ಪ್ರೀಜ್ ಮಾಡುವಂತೆ ಕೋರಿದ್ದಾರೆ. ಆಗ ಬ್ಯಾಂಕ್‌ನವರು ಯಾರಿಗೂ ಓಟಿಪಿ ನೀಡಬೇಡಿ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

೧೧ನೇ ತಾರೀಖು ಖಾತೆಯಿಂದ ೨ಲಕ್ಷ ಡೆಬಿಟ್ ಆಗಿರುವ ಬಗ್ಗೆ ಸಂದೇಶ ಬಂದಿದ್ದು, ಇದರ ಬಗ್ಗೆ ಉದ್ಯಮಿಯು, ತಕ್ಷಣ ಅಣ್ಣನ ಮೂಲಕ ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ. ಕೇವಲ ೧೦ ನಿಮಿಷಗಳ ಅಂತರದಲ್ಲಿ ಮತ್ತೆ ಹಣ ಡೆಬಿಟ್ ಆಗಿದೆ ಎಂಬುದು ಗೊತ್ತಾಗಿದೆ.

ಈ ಸಂಬAಧ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಕೂಡ ದಾಖಲಾಗಿದೆ. ಗ್ರಾಹಕರ ವೇದಿಕೆಗೂ ದೂರು ನೀಡುತ್ತೇನೆ. ವಿಚಾರ ಗಮನಕ್ಕೆ ತಂದರೂ ಬ್ಯಾಂಕ್‌ನವರು ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ಉದ್ಯಮಿ ಕೆ.ಎ.ಚಾಮರಾಜು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net