ಆನ್‌ಲೈನ್ ವಂಚನೆ

Crime Logo
Published on

ಹೆಚ್ಚಿನ ಲಾಭದ ಆಸೆಗೆ ಅಪರಿಚಿತರ ಮಾತನ್ನು ನಂಬಿ ಷೇರು ವಾರುಕಟ್ಟೆಗೆ ಹಣ ಹೂಡಿದ ವ್ಯಾಪಾರಿಯೊಬ್ಬರು ಬರೋಬ್ಬರಿ 64.80 ಲಕ್ಷ ರೂ. ಕಳೆದುಕೊಂಡಿದ್ದಾರೆ.

ನಗರದ ಎನ್‌ಆರ್ ಮೊಹಲ್ಲಾ ನಿವಾಸಿ ಹಾಗೂ ವ್ಯಾಪಾರಿಯೊಬ್ಬರಿಗೆ ಟ್ರೇಡಿಂಗ್‌ಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಬಂದಿದೆ. ನಂತರ ಅವರು ಗ್ರೂಪ್‌ಗೆ ಸೇರಿದ್ದಾರೆ. ಮೊದಲಿಗೆ ಸ್ವಲ್ಪಮಟ್ಟಿಗಿನ ಹಣ ಹೂಡಿಕೆ ವಾಡಿದ್ದಾರೆ.

ಇದರಿಂದಾಗಿ ಅವರ ಖಾತೆಯಲ್ಲಿ ಲಾಭಾಂಶ ಕಂಡುಬಂದಿದೆ. ನಂತರ ಹಂತಹಂತವಾಗಿ ಅವರು 64.80 ಲಕ್ಷ ರೂ.ಗಳನ್ನು ಷೇರು ವಾರುಕಟ್ಟೆ ಹೆಸರಿನಲ್ಲಿ ಅಪರಿಚಿತರು ಹೇಳಿದ ಖಾತೆಗೆ ಹಣವನ್ನು ಜಮೆ ವಾಡಿದ್ದಾರೆ. ನಂತರ ಅವರಿಗೆ ಯಾವ ಲಾಭವೂ ಬಂದಿಲ್ಲ. ಈ ಸಂಬಂಧ ಅವರಿಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂಬ ಅರಿವಾಗಿ ದೂರು ನೀಡಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net