ಆಧುನಿಕ ಮಾವಿನ ಬೇಸಾಯದ ಬಗ್ಗೆ ೬ ದಿನಗಳ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮಾವು ಉತ್ಕೃಷ್ಟ ಕೇಂದ್ರ, ಹೊಗಳಗೆರೆ ತೋಟಗಾರಿಕೆ ಕ್ಷೇತ್ರದಲ್ಲಿ ಆಧುನಿಕ ಮಾವಿನ ಬೇಸಾಯದ ಬಗ್ಗೆ ೬ ದಿನಗಳವರೆಗೂ ಕೌಶಲ್ಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕನಿಷ್ಠ ೧೮ ವರ್ಷ ಮೇಲ್ಪಟ್ಟಿರಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಟ ೩೫ ವರ್ಷ ಮತ್ತು ಇತರರಿಗೆ ೩೩ ವರ್ಷಗಳೊಳಗಿರಬೇಕು. ತರಬೇತಿಗೆ ಕನಿಷ್ಟ ೫ನೇ ತರಗತಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಗಳು ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದು ತಿಳಿದಿರಬೇಕು.

ತೋಟಗಾರಿಕೆ ಕ್ಷೇತ್ರದ ತರಬೇತಿಯ ದಿನ ಮತ್ತು ಅವಧಿ ಅಕ್ಟೋಬರ್ ೦೯ ರಿಂದ ೧೪ ರವರೆಗೆ ೨೦ ಜನರಿಗೆ, ನವೆಂಬರ್ ೦೬ ರಿಂದ ೧೧ ರವರೆಗೆ ೨೦ ಜನರಿಗೆ ಹಾಗೂ ನ.೨೭ ರಿಂದ ಡಿಸೆಂಬರ್ ೦೨ ರವರೆಗೆ ೨೦ ಜನರಿಗೆ, ಡಿಸೆಂಬರ್ ೧೧ ರಿಂದ ೧೬ ರವರೆಗೆ ೨೦ ಜನರಿಗೆ, ಜನವರಿ ೦೮ ರಿಂದ ೧೪ ರವರೆಗೆ ೨೦ ಜನರಿಗೆ ಹಾಗೂ ಜನವರಿ ೩೦ ರಿಂದ ಫೆಬ್ರವರಿ ೦೩ ರವರೆಗೆ ೨೦ ಜನರಿಗೆ ಈ ತರಬೇತಿಯು ಪ್ರತಿ ತಂಡಕ್ಕೆ ೬ ದಿನಗಳವರೆಗೂ ನಡೆಯಲಿದೆ.

ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ರವರ ಅಧಿಕೃತ ವೆಬ್‌ಸೈಟ್‌ನಲ್ಲಿ ತೋಟಗಾರಿಕ ತರಬೇತಿಗಳಿಗಾಗಿ ದಾಖಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡುವುದು. ರೈತರ ಮಕ್ಕಳಿಗೆ ಆಧ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಕಛೇರಿ ಸಮಯದಲ್ಲಿ ಪಡೆಯಬಹುದು ಎಂದು ಶ್ರೀನಿವಾಸಪುರ ತಾ. ಹೊಗಳಗೆರೆ ಗ್ರಾಮ ಮಾವು ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net