ಆದಿವಾಸಿ ಸಮುದಾಯದ ಸುರೇಶ್ ಕುಟುಂಬದ ಹೇಳಿಕೆ ದಾಖಲು

Crime_20250404130552225.jpg
Published on

ಕೊಲೆಯಾಗಿದ್ದ ಮಹಿಳೆ ಪತ್ತೆಯಾದ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸರು ಆದಿವಾಸಿ ಸಮುದಾಯದ ಸುರೇಶ್ ಕುಟುಂಬದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಮಂಗಳವಾರ ಸುರೇಶ್, ಅವರ ಪುತ್ರ, ಮಲ್ಲಿಗೆಯ ತಾಯಿ ಗೌರಿ, ಪ್ರಕರಣದ ಪ್ರಮುಖ ಸಾಕ್ಷಿ ಸುರೇಶ್ ಅವರನ್ನು ತಮ್ಮ ಕಚೇರಿಯಲ್ಲಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು.

ಪ್ರಕರಣದುದ್ದಕ್ಕೂ ಪೊಲೀಸರು ಏನೇನು ಮಾಡಿದರು. ಕೊಲೆ ಮಾಡದಿದ್ದರೂ ಯಾಕಾಗಿ ಪ್ರಕರಣವನ್ನು ನಾನೇ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದೀರಿ ಇತ್ಯಾದಿ ಪ್ರಶ್ನೆಗಳನ್ನು ಎಸ್‌ಪಿಯು ಸುರೇಶ್ ಬಳಿ ಕೇಳಿದ್ದಾರೆ ಎನ್ನಲಾಗಿದೆ.

ಸುರೇಶ್ ಅವರ ಮಗ ಪೊಲೀಸರು ಮನೆಗೆ ಬಂದು ತೊಂದರೆ ನೀಡುತ್ತಿದ್ದ ಬಗ್ಗೆ ತಿಳಿಸಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 52 ಜನರನ್ನು ಸಾಕ್ಷಿಧಾರರನ್ನಾಗಿ ಮಾಡಿ ಪೊಲೀಸರು ವರದಿ ಸಲ್ಲಿಸಿದ್ದರು. ಅದರಲ್ಲಿ ಸುರೇಶ್ ಎಂಬಾತನನ್ನು ಪ್ರಮುಖ ಸಾಕ್ಷಿಯನ್ನಾಗಿ ಮಾಡಲಾಗಿತ್ತು. ಈ ಬಗ್ಗೆ ಆತನಿಂದ ವಿವರಣೆ ಪಡೆದಿದ್ದಾರೆ.

ಪ್ರಕರಣ ಸಂಬಂಧ 15 ದಿನಗಳ ಒಳಗೆ ವರದಿ ನೀಡುವಂತೆ ನ್ಯಾಯಾಲಯವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದು, ಏ.17ರಂದು ಮುಂದಿನ ವಿಚಾರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net