ಆಟೋ ಮೊಬೈಲ್ಸ್ ಅಂಗಡಿ ಬೆಂಕಿಗಾಹುತಿ

2009klb07
Published on

ಕಲಬುರಗಿ: ನಗರದ ರಾಷ್ಟ್ರಪತಿ ವೃತ್ತದಿಂದ ಎಸ್‌ಬಿ ಕಾಲೇಜಿಗೆ ಬರುವ ಮಾರ್ಗದಲ್ಲಿರುವ ಶರಣಬಸವ ಆಟೋ ಮೊಬೈಲ್ಸ್ ಮತ್ತು ಗ್ಯಾರೇಜ್‌ಗೆ ಗುರುವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ. ಶರಣಬಸಪ್ಪ ಹಡಗಿಲ್ ಅವರ ಆಟೋ ಮೊಬೈಲ್ ಅಂಗಡಿ ಸುಟ್ಟಿರುವುದು. ಗುರುವಾರ ಸಂಜೆ ಅಂಗಡಿ ಮುಚ್ಚಿಕೊಂಡು ಹೋಗಿದ್ದು, ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿದೆ. ಬೆಂಕಿ ಕೆನ್ನಾಲಿಗೆಗೆ ಇಡೀ ಅಂಗಡಿಯಲ್ಲಿದ್ದ ಹೊಸ ಟೈರ್‌ಗಳು, ದ್ವಿಚಕ್ರವಾಹನಕ್ಕೆ ಬೇಕಾದ ಸಾಧನಗಳು, ಗ್ಯಾರೇಜ್‌ಗೆ ರಿಪೇರಿಗೆ ಬಂದಿದ್ದ ಮೂರು ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net