ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಆರ್ ಪಿಎಫ್ ಬೈಕ್ ರ್ಯಾಲಿ

Published on

ಹುಬ್ಬಳ್ಳಿ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರೈಲ್ವೆ ಸುರಕ್ಷಾ ದಳ‌(ಆರ್ ಪಿಎಫ್) ಆರಂಭಿಸಿರುವ ಬೈಕ್ ರ್ಯಾಲಿಗೆ ಹುಬ್ಬಳ್ಳಿಯ ರೈಲ್ ಸೌಧದಲ್ಲಿ ನೈಋತ್ಯ ರೈಲ್ವೆ ವಲಯದ ಮಹಾ ಪ್ರಬಂಧಕ ಸಂಜೀವ ಕಿಶೋರ ಸೋಮವಾರ ಚಾಲನೆ ನೀಡಿದರು. ನೈಋತ್ಯ ರೈಲ್ವೆ ವಲಯ, ಸದರ್ನ್ ವಲಯ, ಈಸ್ಟರ್ನ್ ರೈಲ್ವೆ ವಲಯದಿಂದ ಕಳೆದ ೧೫; ದಿನಗಳ ಹಿಂದೆ ಬೈಕ್ ರ್ಯಾಲಿ ಆರಂಭಿಸಲಾಗಿದೆ. ನೈಋತ್ಯ ರೈಲ್ವೆಯ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗದಿಂದ ೧೫ ಬೈಕ್ ಗಳಲ್ಲಿ ಒಟ್ಟು ೩೦ ಜನ ಆರ್ ಪಿಎಫ್ ಸಿಬ್ಬಂದಿ ಹುಬ್ಬಳ್ಳಿಯಿಂದ ಸಿಕಂದರಾಬಾದ್ ಗೆ ತೆರಳಿದರು. ಸಿಕಂದರಾಬಾದ್ ನಿಂದ ಉಳಿದ ವಲಯಗಳ ಆರ್ ಪಿಎಫ್ ಸಿಬ್ನಂದಿ ಸೇರಿ ದೆಹಲಿಗೆ ಬೈಕ್ ರ್ಯಾಲಿಯಲ್ಲಿ ಹೊರಡಲಿದ್ದಾರೆ. ಆಗಷ್ಟ್ ೧೪ ಕ್ಕೆ ದೆಹಲಿ ತಲುಪಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net