ಆಕ್ರೋಶದ ನಡುವೆ ಕೋಲಾರ ನಗರಸಭೆ ಮಳಿಗೆ ವಶ: ಪೊಲೀಸ್ ಬಲ ಪ್ರಯೋಗಿಸಿ ಅಂಗಡಿ ತೆರವು, ಅಧಿಕಾರಿಗಳ ದಂಡ ಪ್ರಯೋಗ, ಲುಘು ಲಾಠಿ ಪ್ರಹಾರ

31-klr-004.-jpg
Published on

ಕೋಲಾರ: ನಗರಸಭೆಯ ಬಾಡಿಗೆ ಅವಧಿ ಮುಗಿದ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಸೋಮವಾರ ನಡೆದಿದ್ದು, ವಾಲೀಕರು ಮತ್ತು ಅಧಿಕಾರಿಗಳ ನಡುವೆ ವಾತಿನ ಚಕಮಕಿ ನಡೆಯಿತು. ಆಕ್ರೋಶಭರಿತ ವಾಲೀಕರ ಗುಂಪು ಚದುರಿಸಲು ಪೊಲೀಸರು ಲುಘು ಲಾಠಿ ಪ್ರಹಾರ ಮಾಡಿದರು.

ಸುವಾರು 35 ವರ್ಷದ ಹಿಂದೆ ಹರಾಜು ಪ್ರಕ್ರಿಯೆಯಲ್ಲಿ ಬಾಡಿಗೆ ಪಡೆದಿದ್ದ 220ಕ್ಕೂ ಹೆಚ್ಚು ಮಂದಿ ಅದೇ ಅಂಗಡಿಗಳಲ್ಲಿ ಮುಂದುವರಿದಿದ್ದರು. ಈ ಹಿಂದೆ ಮುಬಾರಕ್ ಅಧ್ಯಕ್ಷರಾಗಿದ್ದಾಗ ಕಾನೂನುಬಾಹಿರವಾಗಿ ಕೆಳ ಮಹಡಿ ಅಂಗಡಿಗಳಿಗೆ 1 ಲಕ್ಷ ಮತ್ತು ಮಹಡಿ ಮೇಲಿನ ಮಳಿಗೆಗೆ 50 ಸಾವಿರ ರೂ. ಪಡೆದು ಅದೇ ವಾಲೀಕರನ್ನು ಮುಂದುವರಿಸುವ ತೀರ್ವಾನ ತೆಗೆದುಕೊಳ್ಳಲಾಗಿತ್ತು. ಆದರೆ ಒಂದೂವರೆ ವರ್ಷದ ಹಿಂದೆ ನಗರಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ವಾನದಂತೆ ಹೊಸದಾಗಿ ಮಳಿಗೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಆದರೆ ಆ ನಂತರವೂ ಹಳಬರೇ ಮುಂದುವರಿದಿದ್ದರು. ವಿಜಯವಾಣಿ ಜ.28ರಂದು ‘ನಗರಸಭೆಗೆ ನಷ್ಟ. ಬಾಡಿಗೆದಾರರಿಗೆ ಕಷ್ಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಾದ ನಂತರ ಮತ್ತೆ ಜ.31ರಂದು ‘ಮರೀಚಿಕೆಯಾದ ನಗರಸಭೆ ಮಳಿಗೆ’ ಶೀರ್ಷಿಕೆಯಡಿ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ಇವೆರಡೂ ಸುದ್ದಿಯಿಂದ ಎಚ್ಚೆತ್ತ ನಗರಸಭೆ ಕಡೇ ಅಸವಾಗಿ ದಂಡ ಪ್ರಯೋಗ್ಕಕಿಳಿಯಿತು. ಹಳಬರನ್ನು ನಿರ್ದಾಕ್ಷಿಣ್ಯವಾಗಿ ಖಾಲಿ ವಾಡಿಸಿ, ಮಳಿಗೆ ಬಾಗಿಲುಗಳಿಗೆ ಸೀಲ್ ವಾಡಿ ವಶಕ್ಕೆ ಪಡೆದುಕೊಂಡಿತು.

ಬೆಳಗ್ಗೆ 10 ಗಂಟೆಗೆ ಕಮಿಷನರ್ ಪ್ರಸಾದ್ ನೇತತ್ವದಲ್ಲಿ ಎಇಇ ಪದ್ಮನಾಭರೆಡ್ಡಿ, ಕಂದಾಯ ನಿರೀಕ್ಷಕರಾದ ತ್ಯಾಗರಾಜು, ನಾಗರಾಜು, ಕಂದಾಯ ಅಧಿಕಾರಿ ಚಂದ್ರು, ಬಿಲ್ ಕಲೆಕ್ಟರ್ಸ್‌ ಅಭಿಷೇಕ್ ವಾನೆ, ಜಗದೀಶ್, ಸುಮಂತ್, ನಾರಾಯಣಸ್ವಾಮಿ, ಪೌರಕಾರ್ಮಿಕರು ಮತ್ತು ಸಿಬ್ಬಂದಿ ಶತಶೃಂಗ ಸಂಕೀರ್ಣದಿಂದ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕೆಲವು ಅಂಗಡಿಯವರು ಸಿಬ್ಬಂದಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ನಮ್ಮಿಂದ ಪಡೆದಿರುವ ಠೇವಣಿ ಹಣ ವಾಪಸ್ ಕೊಟ್ಟರೆ ಈಗಲೇ ತೆರವು ವಾಡುವುದಾಗಿ ಪಟ್ಟು ಹಿಡಿದರು. ನಿಮ್ಮ ದಾಖಲೆ ಪ್ರಸ್ತುತಪಡಿಸಿದರೆ ನಗರಸಭೆಯಿಂದ ಠೇವಣಿ ವಾಪಸ್ ಕೊಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರಾದರೂ ಹಲವರು ಪ್ರತಿರೋಧ ವ್ಯಕ್ತಪಡಿಸಿದರು. ಆಗ ಸ್ಥಳದಲ್ಲೇ ಇದ್ದ ನೂರಾರು ಪೊಲೀಸರು ಲು ಲಾಠಿ ಪ್ರಹಾರ ವಾಡಿ ಗುಂಪು ಚದುರಿಸಿದರು.

ನಗರದಲ್ಲೇ ಹೆಚ್ಚು ಮಳಿಗೆಗಳನ್ನು ಅಂದರೆ 49 ಮಳಿಗೆ ಹೊಂದಿರುವ ಶತಶೃಂಗ ಸಂಕೀರ್ಣದಲ್ಲಿ ಮಧ್ಯಾಹ್ನದ ವೇಳೆಗೆ ಎಲ್ಲ ಹಳಬರಿಂದ ಮಳಿಗೆಗಳನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಕೆಲವರು ಬೀಗದ ಕೀ ಮನೆಯಲ್ಲಿದೆ, 1 ಗಂಟೆ ಕಾಲಾವಕಾಶ ನೀಡಿ ಎಂದೆಲ್ಲ ಸಬೂಬು ಹೇಳಿದರೂ ಅಧಿಕಾರಿಗಳು ಜಗ್ಗದೆ ನಿರ್ದಾಕ್ಷಿಣ್ಯವಾಗಿ ವಸ್ತುಗಳನ್ನು ಸಿಬ್ಬಂದಿ ಸಹಾಯದಿಂದ ಹೊರ ಹಾಕಿ ಬೀಗ ಮುರಿದು ಮಳಿಗೆ ವಶಪಡಿಸಿಕೊಂಡರು. ಉಳಿದ ಮಳಿಗೆ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಕಾಬಂದಿ ಹಾಕಿ ಭದ್ರತೆ: ಅಹಿತಕರ ಟನೆ ನಡೆಯದಂತೆ ಡಿವೈಎಸ್ಪಿ ರಮೇಶ್ ನೇತತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಗ್ನಿಶಾಮಕ ದಳ, ಮೂರು ಕೆಎಸ್ಸಾರ‌್ಪಿ ತುಕಡಿ, ನಗರದ ಎಲ್ಲ ಠಾಣೆಗಳ ಸಿಐ, ಪಿಎಸ್‌ಐ ಮತ್ತು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಶತಶೃಂಗ ಕಾಂಪ್ಲೆಕ್ಸ್ ಕಡೆ ಬರುವ ಎಂಜಿ ರಸ್ತೆ, ಪ್ರಭಾತ್ ಚಿತ್ರಮಂದಿರ ರಸ್ತೆ, ಅಮ್ಮವಾರಿ ಪೇಟೆ ರಸ್ತೆ, ಕಾಳಮ್ಮ ಗುಡಿರಸ್ತೆ, ದೊಡ್ಡಪೇಟೆ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತೆರವು ಕಾರ್ಯಾಚರಣೆ ಮುಗಿಯುವವರೆಗೆ ವಾಹನ, ಜನರ ಪ್ರವೇಶ ನಿರ್ಬಂಧಿಸಲಾಗಿತ್ತು.

220 ಮಳಿಗೆಗಳಲ್ಲಿ 205 ಖಾಲಿ ವಾಡಿಸುತ್ತಿದ್ದೇವೆ. ಸುವಾರು 35 ವರ್ಷದಿಂದ ಮಳಿಗೆಗಳಲ್ಲಿದ್ದು, ಕೆಲವರು ಹೊಸದಾಗಿ ಹರಾಜು ಪ್ರಕ್ರಿಯೆ ನಡೆದಾಗ ಅದರಲ್ಲೂ ಪಾಲ್ಗೊಂಡಿದ್ದಾರೆ. ಅಂತಹವರು ಮೂರು ದಿನದಲ್ಲಿ ಶೇ.50 ಉಳಿದ ಬಿಡ್ ಹಣ ಪಾವತಿಸಿ ಕರಾರು ಪತ್ರ ಪಡೆದು ಮುಂದುವರಿಯಬಹುದು. ಹೊಸಬರಿಗೆ ಅಂಗಡಿ ನೀಡಬೇಕಾಗಿರುವುದರಿಂದ ತೆರವು ಅನಿವಾರ್ಯವಾಗಿದೆ. ಪ್ರಸಾದ್, ನಗರಸಭೆ ಪೌರಾಯುಕ್ತ 1 ಲಕ್ಷ ಠೇವಣಿ ಹಣ ಕೊಟ್ಟರೆ ಮಳಿಗೆ ಖಾಲಿ ವಾಡುತ್ತೇವೆ ಎಂದು ಹೇಳಿದರೂ ಕೇಳುತ್ತಿಲ್ಲ. ಮೊದಲು ಅಂಗಡಿ ಖಾಲಿ ವಾಡಿ, ನಂತರ ನಿಮ್ಮ ದಾಖಲೆಯನ್ನು ಕೌನ್ಸಿಲ್‌ನಲ್ಲಿ ಇಟ್ಟು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ದೌರ್ಜನ್ಯದಿಂದ ನಮ್ಮನ್ನು ಹೊರ ಹಾಕುತ್ತಿದ್ದಾರೆ. ಬಹದ್ದೂರ್ ಸಾಬ್, ಮಳಿಗೆ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net