ವಿಜಯವಾಣಿ ಸುದ್ದಿಜಾಲ ಕೋಲಾರ
ಕೆ.ಸಿ.ವ್ಯಾಲಿ ನೀರು ಅಂತರ್ಜಲ ಹೆಚ್ಚಿಸುವ ಸಲುವಾಗಿ ಅವಿಭಜಿತ ಜಿಲ್ಲೆಗೆ ಹರಿಸಿದ್ದು ಶ್ಲಾಘನೀಯವಾದರೂ ತೃತೀಯ ಹಂತದ ಶುದ್ಧೀಕರಣ ಅಥವಾ ಸರಿಯಾಗಿ ಶುದ್ಧೀಕರಿಸದ ಈ ನೀರಿಯಿಂದ ದೂರ ದೃಷ್ಟಿಯಲ್ಲಿ ಜನರ ಆರೋಗ್ಯ, ಪರಿಸರ, ಕೃಷಿ ಮತ್ತು ಭೂಮಿಯ ಫಲವತ್ತತೆಯ ಮೇಲೆ ಬೀರುವ ಅಪಾಯದ ಕುರಿತು ಆರೋಗ್ಯಕರ ಚರ್ಚೆ ಮತ್ತು ಮುಂಜಾಗ್ರತೆ ಬಯಸುವುದು ಅಗತ್ಯ ಎಂದು ಕರ್ನಾಟಕ ಸರ್ಕಾರದ ಸರ್ ಸಿ.ವಿ.ರಾಮನ್ ಪ್ರಶಸ್ತಿ ಪುರಸ್ಕöÈತರು, ಯುವ ವಿಜ್ಞಾನಿ ಮತ್ತು ಭೌತಶಾಸ್ತçದ ಪ್ರಾಧ್ಯಾಪಕರು ಹಾಗೂ ತಾಲ್ಲೂಕಿನ ಹೊಳಲಿ ಗ್ರಾಮದವಾದ ಡಾ.ಹೆಚ್.ಸಿ.ಮಂಜುನಾಥ ಅಭಿಪ್ರಾಯಪಟ್ಟಿದ್ದಾರೆ.
ಯುವ ವಿಜ್ಞಾನಿಯೂ ಆದ ಅವರು ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಪ್ರಸ್ತಾಪಿಸಿ, ಬಯಲುಸೀಮೆ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಅಂತರ್ಜಲ ಸಮಸ್ಯೆ ಪರಿಹರಿಸುವ ಸಲುವಾಗಿ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೈಗಾರಿಕಾ ಮಲಿನ ಅಪೂರ್ಣ ಶುದ್ಧೀಕರಿಸಿದ ಕೆ ಸಿ ವ್ಯಾಲಿ ನೀರು ಹರಿಸಿದ್ದು ಶ್ಲಾಘನೀಯವಾದರೂ ಅದರಿಂದಾಗುವ ಸಮಸ್ಯೆಗಳ ಕುರಿತು ಮುಂಜಾಗ್ರತೆಯೂ ಅಗತ್ಯ ಎಂದಿದ್ದಾರೆ.
ಇದಕ್ಕೆ ಹಲವಾರು ಉದಾಹರಣೆ ನೀಡಿರುವ ಅವರು, ದೆಹಲಿ ಮಥುರಾ ಮತ್ತು ಆಗ್ರಾ ನಗರಗಳ ಮಲಿನ ನೀರು ಶುದ್ಧೀಕರಣವಿಲ್ಲದೆ ನೇರವಾಗಿ ಯಮುನಾ ನದಿಗೆ ಸೇರಿ ಬಳಸುವುದರ ಪರಿಣಾಮ ಈಗಾಗಲೇ ಸಾಬೀತಾಗಿದೆ. ಯಮುನಾ ನದಿ ದಂಡೆಯಲ್ಲಿರುವ ರೈತರು ಚರ್ಮದ ಸಮಸ್ಯೆಗಳನ್ನು ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಅತ್ಯಂತ ಪವಿತ್ರವಾದ ಯಮುನಾ ನದಿಯ ನೀರು ಮುಟ್ಟಲು ಸಹ ಭಯಪಡುವ ಪರಿಸ್ಥಿತಿ ತಂದೊಡ್ಡಿದೆ.
ಮತ್ತೊAದು ನಿರ್ದೇಶನವೆಂದರೆ ಅಮೆರಿಕಾದ ಪ್ಲಿಂಟ್ ನದಿಯ ಘಟನೆ. ೨೦೧೪ ರಲ್ಲಿ ನಗರ ತನ್ನ ನೀರು ಸರಬರಾಜು ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಹುರಾನ್ ಸರೋವರದಿಂದ ಬರುತ್ತಿರುವ ನೀರಿನ ವ್ಯವಸ್ಥೆ ಬದಲಿಸಿ, ಪ್ಲಿಂಟ್ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡಲು ಪ್ರಾರಂಭಿಸಿತು. ಈ ನೀರನ್ನು ಸರಿಯಾಗಿ ಶುದ್ಧೀಕರಿಸಲಿಲ್ಲದ ಪರಿಣಾಮ ಕೆಲವು ವರ್ಷಗಳ ನಂತರ ಸಾವಿರಾರು ನಾಗರಿಕರು ಮತ್ತು ಮಕ್ಕಳು ಇಬ್ಬರ ಆರೋಗ್ಯ ಸಮಸ್ಯೆಗೆ ಒಳಗಾದಾಗ ಅಮೆರಿಕ ಸರ್ಕಾರ ಸರಿಯಾದ ನೀರಿನ ಪೂರೈಕೆಯನ್ನು ಮಾಡಲಾಯಿತು. ಇನ್ನೂ ಹಲವಾರು ನಿರ್ದೇಶನಗಳು ಚರಿತ್ರೆಯಲ್ಲಿ ನಾವು ನೋಡಬಹುದಾಗಿದೆ.
ಪ್ರಾಥಮಿಕ ಶುದ್ಧೀಕರಣದಲ್ಲಿ ಕೆಲವು ದೊಡ್ಡ ಘನತ್ಯಾಜ್ಯಗಳನ್ನು ಬೇರ್ಪಡಿಸಿದರೆ, ಕಾರ್ಬನ್ ಪದಾರ್ಥಗಳು, ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿಕರವಾದ ಸೂಕ್ಷಾ÷್ಮಣು ಜೀವಿಗಳನ್ನು ದ್ವಿತೀಯ ಹಂತದ ಶುದ್ಧೀಕರಣದಲ್ಲಿ ಬೇರ್ಪಡಿಸಲಾಗುತ್ತದೆ. ಪ್ರಥಮ ಮತ್ತು ದ್ವಿತೀಯ ಹಂತದ ನಂತರ ಭಾರಿ ಲೋಹಗಳಾದ ಲೀಡ್, ಕಾಡ್ಮಿಯಮ್, ಪಾದರಸ ಮುಂತಾದವು ತ್ಯಾಜ್ಯ ನೀರಿನಲ್ಲಿ ಉಳಿಯುವಂತಾಗುತ್ತವೆ.
ಇಕಾಯಿಲ್, ಸಲ್ಮೋನೆಲ್ಲಾ, ಹೆಪಟೈಟಿಸ್-ಎ ನಂತಹ ಸೂಕ್ಷಾ÷್ಮಣು ಜೀವಿಗಳು ಕೂಡ ಉಳಿದು ಹೋಗುತ್ತದೆ. ವಿಷಕಾರಿ ಲೋಹಗಳು ಕೃಷಿ ಉತ್ಪನ್ನ ಮೂಲಕ ಆಹಾರ ಸರಪಳಿಗೆ ಪ್ರವೇಶಿಸಿ ನರ ಸೋಂಕು, ಮೂತ್ರಪಿಂಡಗಳ ಹಾನಿ ಮತ್ತು ಮಕ್ಕಳ ಬೆಳವಣಿಗೆಗೆ ತೊಂದರೆಗಳಾಗಬಹುದು. ಹಾಗೆ ತ್ಯಾಜ್ಯ ನೀರಿನಲ್ಲಿ ಉಳಿದುಕೊಂಡಿರುವ ಅಪಾಯಕಾರಿ ಸೂಕ್ಷಾ÷್ಮಣು ಜೀವಿಗಳಿಂದ ಮಲೇರಿಯ ಟೈಫಾಯಿಡ್ ಹಾಗೂ ಚರ್ಮರೋಗಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ತೃತಿಯ ಹಂತ ಶುದ್ಧೀಕರಣ ಆಗದೆ ಇರುವ ತ್ಯಾಜ್ಯ ನೀರಿನಲ್ಲಿ ನೈಟ್ರೋಜನ್ ಮತ್ತು ಫಾಸ್ಫರಸ್ ಪ್ರಮಾಣ ಹೆಚ್ಚಿರುವುದರಿಂದ ಯುಟ್ರೋಫಿಕೇಶನ್ ಪ್ರಕ್ರಿಯೆ ಮೂಲಕ ಕೆರೆ ಕೊಳಗಳಲ್ಲಿರುವ ನೀರಿನಲ್ಲಿ ಬೆಳೆಯುವ ಹಸಿರು ಶೈವಲಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿ ಮೀನುಗಳು ಹಾಗು ಇತರೆ ಜಲಚರ ಜೀವಿಗಳು ಸಾಯುವ ಸಾಧ್ಯತೆ ಹೆಚ್ಚುತ್ತದೆ.
ಶುದ್ಧವಾದ ನೀರು ಕಲುಶಿತವಾಗುವುದು ಮನಸ್ಸಿಗೆ ಕಷ್ಟವಾದರೂ ಅಂತರ್ಜಲ ಕುಸಿತ ಕಾರಣದಿಂದ ಕೋಲಾರ ಜಿಲ್ಲೆಗೆ ಹರಿಸುತ್ತಿರುವ ಕೇಸಿ ವ್ಯಾಲಿ ನೀರು ಸಮರ್ಪಕವಾದ ತೃತೀಯ ಹಂತದ ಶುದ್ಧೀಕರಣದ ಜೊತೆಗೆ ಆಗಾಗ್ಗೆ ಬಿಒಡಿ ಮತ್ತು ಸಿಒಡಿ ಪ್ರಮಾಣ ವೈಜ್ಞಾನಿಕವಾಗಿ ಪರೀಕ್ಷೆ ಮಾಡುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರ ೨೦ ಕೆ.ಎಲ್.ಆರ್. ೦೪ : ಯುವ ವಿಜ್ಞಾನಿ ಡಾ.ಹೆಚ್.ಸಿ.ಮಂಜುನಾಥ ಭಾವಚಿತ್ರ