ಅರಾಭಿಕೊತ್ತನೂರು ಗ್ರಾಮದಲ್ಲಿ ವಿವಿಧ ಇಲಾಖಾ ಅಧಿಕಾರಿಗಳಿಗೆ ನಿರ್ಮಿಸಲಾಗಿರುವ ಕೊಠಡಿಗಳು ಅವನತಿ ಅಂಚಿಗೆ / ತ್ಯಾಜ್ಯ ತುಂಬಿರುವ ಕಛೇರಿಗಳು / ಬಾಗಿಲು ತೆಗೆಯದ ಅಧಿಕಾರಿಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಕಛೇರಿಗಳಿಗಾಗಿ ಕಟ್ಟಲಾಗಿದ್ದ ಕೊಠಡಿಗಳ ಬಾಗಿಲುಗಳನ್ನು ವರ್ಷಾನುಗಟ್ಟಲೆ ಅಧಿಕಾರಿಗಳು ಬೀಗ ತೆಗೆಯದೇ ಇರುವುದರಿಂದ ಕಛೇರಿಗಳ ಕೊಠಡಿಗಳು ಪಾಳುಕೊಂಪೆಗಳಾಗಿ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿವೆ.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಆ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ಕೃಷಿ ಕೇಂದ್ರ ಮತ್ತು ಶುಶ್ರೂಷಕಿಯರ ವಸತಿ ಕೇಂದ್ರಗಳು ನಿರ್ವಹಣೆಯಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಸುತ್ತ ಮುತ್ತಲ ಅಂಗಡಿ ಮಾಲೀಕರು ತ್ಯಾಜ್ಯವನ್ನು ಕಛೇರಿಗಳ ಮುಂದೆ ಸುರಿದು ಗಬ್ಬು ನಾರುತ್ತಿದ್ದು, ಗ್ರಾಮಸ್ಥರು ದುರ್ವಾಸನೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಕಛೇರಿಗಳಲ್ಲಿ ಕೂರಬೇಕಾಗಿದ್ದ ಅಧಿಕಾರಿಗಳು ನಗರದಲ್ಲಿ ಇದ್ದು, ಅವರನ್ನು ಹುಡುಕಿ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ. ಸಾರ್ವಜನಿಕರು ಅಧಿಕಾರಿಗಳನ್ನು ಹುಡುಕಿ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ಅಧಿಕಾರಿಗಳು ಕಛೇರಿಯಲ್ಲಿ ಇರುವಂತೆ ಕಛೇರಿ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಕೋಟ್

ಅರಾಭಿಕೊತ್ತನೂರು ಗ್ರಾಮದ ಹೃದಯ ಭಾಗದಲ್ಲಿರುವ ಕೃಷಿ ಕೇಂದ್ರ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಮತ್ತು ಶುಶ್ರೂಷಕಿಯರ ವಸತಿ ಕೇಂದ್ರದ ಕೊಠಡಿಗಳು ಸುಮಾರು ವರ್ಷಗಳಿಂದ ಖಾಲಿ ಬಿದ್ದಿದ್ದು ಪಾಳು ಬೀಳುವ ಸ್ಥಿತಿಯಲ್ಲಿವೆ ಆದ್ದರಿಂದ ಸಂಬAಧಪಟ್ಟ ಇಲಾಖೆಗಳಿಗೆ ಗ್ರಾಮ ಪಂಚಾಯಿತಿಯಿAದ ಪತ್ರ ಬರೆದಿದ್ದು ಆ ಕೊಠಡಿಗಳನ್ನು ಪಂಚಾಯಿತಿ ವ್ಯಾಪ್ತಿಗೆ ನೀಡಿದರೆ ಸ್ವಚ್ಛಗೊಳಿಸಿ ಅಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಿಸಲಾಗುವುದು. ಆದರೆ ಸಂಬAಧಿಸಿದ ಇಲಾಖೆಗಳವರು ಇದುವರೆವಿಗೂ ನಮ್ಮ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-ಶಾಲಿನಿ, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ.

ಕೋಟ್

ಗ್ರಾಮದ ಹೃದಯಭಾಗದಲ್ಲಿ ಕೊಠಡಿಗಳು ಪಾಳು ಬೀಳುವ ಸ್ಥಿತಿಯಲ್ಲಿದ್ದು, ಕಛೇರಿಗಳ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸದರಿ ಕೊಠಡಿಗಳನ್ನು ಬೇರೆ ಇಲಾಖೆಗಳಿಗೆ ನೀಡಬೇಕು. ಅಥವಾ ಪಂಚಾಯ್ತಿ ವ್ಯಾಪ್ತಿಗೆ ತೆಗೆದುಕೊಳ್ಳಿ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಗಳು ಹಲವಾರು ಬಾರಿ ಮನವಿ ನೀಡಿದ್ದರು ಪ್ರಯೋಜನವಾಗಿಲ್ಲ.

-ಶ್ರೀಧರ್, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ.

ಕೋಟ್

ಗ್ರಾಮೀಣ ಭಾಗದ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ನಗರ ಪ್ರದೇಶಕ್ಕೆ ಹೋಗಬಾರದು ಎಂದು ಗ್ರಾಮಪಂಚಾಯ್ತಿ ಕೇಂದ್ರಗಳ ವ್ಯಾಪ್ತಿಯಲ್ಲಿಯೇ ಅಧಿಕಾರಿಗಳು ಸಿಗಬೇಕೆಂದು ಅವರಿಗೆ ಕಛೇರಿಗಳಿಗಾಗಿ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗಿದೆ. ಆದರೆ ಆಕಛೇರಿಗಳ ಬಾಗಿಲುಗಳನ್ನು ಅಧಿಕಾರಿಗಳು ತೆಗೆಯದೇ ಇರುವುದರಿಂದ ಕಛೇರಿಗಳ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಗ್ರಾಮಪಂಚಾಯ್ತಿಯವರು ಕಛೇರಿಗಳ ಮುಂಭಾಗ ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿಲ್ಲ. ಜಿಲ್ಲಾಡಳಿತಕ್ಕೆ ದೂರು ನೀಡುವ ಕೆಲಸ ಗ್ರಾಮಪಂಚಾಯ್ತಿಯವರು ಮಾಡಬೇಕಾಗಿದೆ.

-ಮೋಹನ್, ಅರಾಭಿಕೊತ್ತನೂರು ಗ್ರಾಮಸ್ಥ

ಚಿತ್ರ ೦೨ ಕೆ.ಎಲ್.ಆರ್. ೦೩ : ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿ ಕಛೇರಿ, ಶುಶ್ರೂಕಿಯರ ವಸತಿ ಕೊಠಡಿ, ಕೃಷಿ ಅಧಿಕಾರಿ ಕೊಠಡಿಗಳು ಬಾಗಿಲು ತೆಗೆಯದೆ ಪಾಳು ಬೀಳುವಂತಾಗಿದೆ.

ಚಿತ್ರ ೦೨ ಕೆ.ಎಲ್.ಆರ್. ೦೩ಎ : ಕಛೇರಿಗಳ ಮುಂಭಾಗ ತ್ಯಾಜ್ಯ ತುಂಬಿರುವುದು.

ಚಿತ್ರ ೦೨ ಕೆ.ಎಲ್.ಆರ್. ೦೩ಬಿ : ಶ್ರೀಧರ್, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಭಾವಚಿತ್ರ

ಚಿತ್ರ ೦೨ ಕೆ.ಎಲ್.ಆರ್. ೦೩ಸಿ : ಮೋಹನ್, ಅರಾಭಿಕೊತ್ತನೂರು ಗ್ರಾಮಸ್ಥನ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net