ಅರಗು ಬೆಳೆದು ಲಾಭ ಗಳಿಸಿ

cf1e5400-1525-42d0-a4a3-54ad4ae9fec2
Published on


ಬನ್ನಿಕುಪ್ಪೆ: ಸೂಕ್ತ ವಿಧಾನಗಳಿಂದ ಕೃಷಿ ಮಾಡಿದರೆ ಅರಗು ಬೆಳೆ ಲಾಭದಾಯಕವಾಗಿದೆ ಎಂದು ಮೈಸೂರಿನ ಕೀಟ ವಿಜ್ಞಾನಿ ಡಾಕ್ಟರ್ ಜಿ.ಕೆ. ರಾಮೇಗೌಡ ಹೇಳಿದರು.
ಗ್ರಾಮದಲ್ಲಿ ಮೈಸೂರು ಲ್ಯಾಕ್ ಗ್ರೋವರ್ ಸಂಸ್ಥೆ ಹಮ್ಮಿಕೊಂಡಿದ್ದ ಅರಗು ಬೆಳೆಯ ಅರಿವಿನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅರಗು ಬೆಳೆಯ ಬೇಸಾಯ ಕ್ರಮಗಳು, ಮಣ್ಣು, ಪರೀಕ್ಷೆ, ಬೀಜೋಪಚಾರ, ಬಿತ್ತನೆ ನಾಟಿ ವಿಧಾನ, ನೀರಿನ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿಗಳನ್ನು ತೋಟಗಾರಿಕೆ ಇಲಾಖೆಯಿಂದ ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಎನ್. ರವಿ ಮಾತನಾಡಿ ಅರಗು ಬೆಳೆ ಸಂರಕ್ಷಣೆ ಮತ್ತು ಅರಗಿನ ಉತ್ಪನ್ನಗಳಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು.
ಮೈಸೂರು ಲ್ಯಾಕ್ ಗ್ರೋವರ್ ಸಂಸ್ಥೆ ಅಧ್ಯಕ್ಷ ಚೆಲುವರಾಜು ಮಾತನಾಡಿ, ಅರಗಿನ ಬೆಳೆ ಉದ್ಯೋಗ ಸೃಷ್ಟಿ ಮಾಡುವ ಪೂರಕ ಬೆಳೆಯಾಗಿದೆ ಎಂದರು. ಇರುವ ಜಮೀನುಗಳಲ್ಲೇ ಕಡಿಮೆ ನೀರಿನಲ್ಲಿ ಅರಗು ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ವಿವರಿಸಿದರು. ಲ್ಯಾಕ್ ಗ್ರೋವರ್ ಸಂಸ್ಥೆ ನಿರ್ದೇಶಕರಾದ ಪ್ರೇಮಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net