ಅಯ್ಯೋ ಪ್ರಾಬ್ಲಂ ಕಣ್ರಿ, ಎನ್​ಸಿಎಂ ಫುಟ್​ಪಾತ್ ಮೇಲೆ ಕಸ…

Published on

ಹುಬ್ಬಳ್ಳಿ: ಇಲ್ಲಿಯ ನ್ಯೂ ಕಾಟನ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಕಟ್ಟಡಕ್ಕೆ ಹೊಂದಿಕೊಂಡಿರುವ ಫುಟ್​ಪಾತ್ ಮೇಲೆ ಕಸ ಹಾಕುತ್ತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

ಅಲ್ಲದೇ, ಫುಟ್​ಪಾತ್ ಮೇಲೆ ಬೀದಿಬದಿ ವ್ಯಾಪಾರಸ್ಥರು ಡಬ್ಬಾ ಅಂಗಡಿ ಇಟ್ಟುಕೊಳ್ಳುತ್ತಿದ್ದು, ಇದರಿಂದಲೂ ಕಸ ಹೆಚ್ಚಾಗುತ್ತಿದೆ. ಹಂದಿ ನಾಯಿಗಳ ತಾಣವಾಗುತ್ತಿದೆ.

ಇಲ್ಲಿನ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳಿಗೂ ಸಾಕಷ್ಟು ಬಾರಿ ಹೇಳಿಯಾಗಿದೆ. ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಎನ್​ಸಿಎಂ ವ್ಯಾಪಾರಸ್ಥರ ಸಂಘದ ಕಟ್ಟಡದ ಮುಂದೆ ಮತ್ತು ಅಕ್ಕಪಕ್ಕ ಹೊಸದಾಗಿ ಕಾಂಕ್ರೀಟ್ ರಸ್ತೆ, ಫುಟ್​ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸೌಂದರ್ಯವನ್ನು ಕಸ ಹಾಕಿ ಹಾಳು ಮಾಡಲಾಗುತ್ತಿದೆ.

ಅನಧಿಕೃತ ಡಬ್ಬಾ ಅಂಗಡಿ ಇಟ್ಟಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಕ್ರಮ ಚಟುವಟಿಕೆಗಳಿಗೂ ದಾರಿ ಮಾಡಿಕೊಡುತ್ತಿದೆ. ಕೆಲವರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ವಾತಾವರಣ ಗಬ್ಬು ಎದ್ದಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವರ್ತಕರ ಸಂಘ ಮನವಿ ಮಾಡುತ್ತದೆ.

- ರಾಜಕಿರಣ ಮೆಣಸಿನಕಾಯಿ, ವರ್ತಕರ ಸಂಘದ ಅಧ್ಯಕ್ಷ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net