

ಸೆಪ್ಟೆಂಬರ್ 19 ರಂದು ಮಧ್ಯಾಹ್ನ 02 ಗಂಟೆಯಲ್ಲಿ ಜಯಣ್ಣ ತಂದೆ ಮಂಜುನಾಥ ಸುಮಾರು 68 ವರ್ಷದ ವ್ಯಕ್ತಿ ಮೈಸೂರು ನಗರದ ಅಶೋಕ ರಸ್ತೆಯ ಬಳಿ ಅಸ್ವಸ್ಥರಾಗಿ ಬಿದ್ದಿದ್ದವರನ್ನು ಸಾರ್ವಜನಿಕರು ಹೆಚ್ಚಿನ ಚಿಕಿತ್ಸೆಗೆ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಜಯಣ್ಣ ರವರು ಸೆಪ್ಟೆಂಬರ್ 24 ರಂದು ಸಂಜೆ 07.48 ರಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಜಯಣ್ಣ ತಂದೆ ಮಂಜುನಾಥ, ಸುಮಾರು 68 ವಯಸ್ಸಾಗಿದ್ದು, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಬಿಳಿ ತಲೆ ಕೂದಲು, ಗಡ್ಡ ಮೀಸೆ ಬಿಟ್ಟಿರುತ್ತಾರೆ. ಎದೆಯ ಭಾಗದಲ್ಲಿ ಕಪ್ಪು ಕಾರೆಳು ಇರುತ್ತದೆ. ಮೈ ಮೇಲೆ ಬಿಳಿ ಬಣ್ಣದ ಆಸ್ಪತ್ರೆಯ ಬೆಡ್ಸಿಟ್ ಹೊದಿಸಿರುತ್ತಾರೆ.
ಅಪರಿಚಿತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ದೂ.ಸಂ:0821-2418107, 2418307, ಪೊಲೀಸ್ ಆಯುಕ್ತರ ದೂ.ಸಂ: 0821-2418180, ಮೈಸೂರು ನಗರ ಕಂಟ್ರೋಲ್ ರೂಂ:0821-2418337, 2418340 ನ್ನು ಸಂಪರ್ಕಿಸಬಹುದಾಗಿದೆ ಎಂದು ಲಷ್ಕರ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.