ಅಧ್ಯಾತ್ಮ ಸೆಲೆಯೊಂದಿಗೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

sahi engal
ಚಿಕ್ಕಮಗಳೂರಿನ ಸಾಯಿ ಏಜೆಂಲ್ಸ್ ಎಜುಕೇಷನ್ ಇನ್ಸ್‌ಟಿಟ್ಯೂಟ್ ಶಾಲೆಯಲ್ಲಿ ಶ್ರೀಕೃಷ ್ಣಜನ್ಮಾಷ್ಟಮಿ ಅಂಗವಾಗಿ ಶಾಲೆಯ ಆಡಳಿತ ಮಂಡಳಿಯಿಂದ ಗೋಪೂಜೆ ನೆರವೇರಿಸಲಾಯಿತು. ಬಿ.ಎಸ್.ನಾಗೇಶ್, ವಿಜಯಲಕ್ಷ್ಮೀ ನಾಗೇಶ್, ಯಾಮಿನಿ ಸಾವುರ್ ಇತರರಿದ್ದರು.
Published on

ಚಿಕ್ಕಮಗಳೂರು: ಆಧ್ಯಾತ್ಮಿಕ ಸೆಲೆಯನ್ನು ಬೆಸೆಯುವುದರೊಂದಿಗೆ ಸಾಯಿ ಏಜೆಂಲ್ಸ್ ಶಾಲೆ ಮಕ್ಕಳು ಶ್ರೀಕೃಷ್ಣ-ರಾಧೆಯರ ವೇಷಭೂಷಣದೊಂದಿಗೆ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಸಾಯಿ ಏಂಜೆಲ್ಸ್ ಎಜುಕೇಷನ್ ಇನ್ಸ್‌ಟಿಟ್ಯೂಟ್, ಮಂಜುಮಲ್ಲಿಗೆ ರೆಸಿಡೆನ್ಸಿಯಲ್ ಲೇಔಟ್, ಆಸ್ಪದ ಡೆವಲಪರ್ಸ್ ಹಾಗೂ ವಿಜಯವಾಣಿ ಸಹಯೋಗದಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ಏರ್ಪಡಿಸಲಾಗಿತ್ತು. ಶಾಲೆಯ ಆವರಣ ಸಡಗರದಿಂದ ಕಳೆಗಟ್ಟಿತ್ತು.
ಶಾಲೆಯ 250ಕ್ಕೂ ಅಧಿಕ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಜೆಸಿಐಯಿಂದ ನೀರನ್ನು ಉಳಿಸಿ ನಮ್ಮ ಜೀವವನ್ನು ಒಟ್ಟಿಗೆ ಉಳಿಸಬೇಕೆಂಬ ಅಭಿಯಾನದಡಿ ಪ್ಲಾಸ್ಟಿಕ್ ಮುಕ್ತ ಪರಿಸರದ ಕಾಳಜಿಯೊಂದಿಗೆ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ವಿಜಯವಾಣಿ ಶಿವಮೊಗ್ಗ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ, ಜಾಹೀರಾತು ವಿಭಾಗದ ಮುಖ್ಯಸ್ಥ ದೇವಕುಮಾರ್, ಮಂಜುಮಲ್ಲಿಗೆ ರೆಸಿಡೆನ್ಸಿಯಲ್ ಲೇಔಟ್ ವ್ಯವಸ್ಥಾಪಕ ಪ್ರದೀಪ್ ಶೆಟ್ಟಿ, ಕಾರ್ತಿಕ್, ಶಾಲೆ ಪ್ರಾಚಾರ್ಯೆ ಯಾಮಿನಿ ಸಾವುರ್, ಜೂನಿಯರ್ ಚೇಂಬರ್ಸ್‌ ಸಂಸ್ಥೆ ಅಧ್ಯಕ್ಷೆ ಚೈತ್ರಾ, ಜೆಸಿಐ ಅಧ್ಯಕ್ಷ ಅನಿಲ್, ಪದಾಧಿಕಾರಿಗಳಾದ ಗಿರಿಧರ್, ಸುಶ್ಮಿತಾ, ಜ್ಯೋತಿ, ಅಪರ್ಣಾ, ಕೀರ್ತಿರಾಜ್ ಶೆಟ್ಟಿ, ಎಸ್‌ಡಿಜೆ ಕಾಲೇಜು ಪ್ರಾಚಾರ್ಯ ಲೋಹಿತ್, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net