ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳಿ/ಜಯಭೀಮ್ ಸಂಘಟನೆಯಿoದ ಮನವಿ.

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕ್ರಷರ್ ಪ್ಯಾಕ್ಟರಿಗಳ ಮಾಲೀಕರು ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ತಾಲ್ಲೂಕಿನ ನರಸಾಪುರ ಹೋಬಳಿ ಕೆ.ಬಿ.ಹೊಸಹಳ್ಳಿ ಗ್ರಾಮದ ದಲಿತರ ಮತ್ತು ರೈತರ ಜಮೀನುಗಳ ಮೇಲೆ ನಡೆಯುತ್ತಿರುವ ಅನ್ಯಾಯ, ಅಕ್ರಮ, ಕಿರುಕುಳ ಮತ್ತು ದೌರ್ಜನ್ಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೈ ಭೀಮ್ ಭಾರತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ದಲಿತರು ಮತ್ತು ಶೂದ್ರರು ಬಹುಸಂಖ್ಯಾತರಾಗಿರುತ್ತಾರೆ. ಇಲ್ಲಿನ ಜನರು ಕಷ್ಠ ಜೀವಿಗಳಾಗಿ ಕೂಲಿ ನಾಲಿ ಮಾಡಿಕೊಂಡು ಹಾಗೂ ತಮ್ಮ ಜಮೀನುಗಳಲ್ಲಿ ರಾಗಿ ಭತ್ತ ಬೆಳೆದು ಜೀವನ ಸಾಗಿಸುತ್ತಿದ್ದರೆ. ಆದರೆ ಇತ್ತೀಚೆಗೆ ಕೆ.ಬಿ.ಹೊಸಹಳ್ಳಿ ಗ್ರಾಮದ ಸವೇ ನಂಬರ್ ೧೧೦ರಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ದೊಡ್ಡದೊಡ್ಡ ಬಂಡೆಗಳು ಮತ್ತು ಗುಟ್ಟೆಗಳನ್ನು ಸ್ಪೋಟಿಸುತ್ತಿದ್ದು, ಬಾರಿ ಸ್ಪೋಟದಿಂದ ಉಂಟಾಗುವ ಶಬ್ದದಿಂದ ಬಹಳಷ್ಟು ಪ್ರಾಣಿ ಪಕ್ಷಿಗಳಿಗೆ ಜೀವಿಸಲು ಸಂಕಷ್ಠವಾಗುತ್ತದೆ. ಹಾಗೂ ಈ ಸ್ಪೊಟದಿಂದ ಹೊರಬರುವ ಬಾರಿ ಗಾತ್ರದ ಕಲ್ಲುಗಳು ಕೆ.ಬಿ.ಹೊಸಹಳ್ಳಿ ಗ್ರಾಮದ ದಲಿತ ಮತ್ತು ರೈತರ ಜಮೀನುಗಳಲ್ಲಿ ಬಿದ್ದು ಇಡೀ ಜಮೀನುಗಳು ಕಲ್ಲುಗಳಿಂದ ಕೂಡಿದ್ದು, ವ್ಯವಸಾಯ ಮಾಡಲು ತುಂಬಾ ಅನಾನುಕೂಲವಾಗಿದೆ ಎಂದು ಜಯಭೀಮ್ ಸಂಘಟನೆ ರಾಜ್ಯಾಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಆರೋಪಿಸಿದರು.

ಇದರಿಂದ ವ್ಯವಸಾಯ ಮಾಡಲು ಆಗುತ್ತಿಲ್ಲ. ಗ್ರಾಮಸ್ಥರು ಹಲವಾರು ಬಾರಿ ಕ್ರಷರ್ ಮಾಲೀಕರಿಗೆ ಮತ್ತು ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪರಿಹಾರ ಅಧಿಕಾರಿಗಳಿಂದ ಕಂಡು ಬಂದಿಲ್ಲ. ಕಾರಣ ಪಟ್ಟಭದ್ರಶಕ್ತಿಗಳು ತಮ್ಮ ಹಣ ಮತ್ತು ರಾಜಕೀಯ ಬಲದಿಂದ ಅಧಿಕಾರಿಗಳ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾರೆಂದು ಆರೋಪಿಸಿದರು.

ಈ ಬಗ್ಗೆ ವೇಮಗಲ್ ಆರಕ್ಷಕ ನಿರೀಕ್ಷಕರಿಗೆ ಕ್ರಷರ್ ಮಾಲೀಕರ ವಿರುದ್ಧ ದೂರನ್ನು ನೀಡಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಆತನ ವಿರುದ್ಧ ಕೇಸು ದಾಖಲಿಸಿರುವುದಿಲ್ಲ. ದೂರು ನೀಡಿದವರ ಮೇಲೆಯೇ ಕ್ರಷರ್ ಮಾಲೀಕರು ದಲಿತರ ಮೇಲೆ ಕಳ್ಳತನದ ಸುಳ್ಳು ಕೇಸು ಹಾಕಿ ಎಫ್.ಐ.ಆರ್. ಮಾಡಿರುತ್ತಾರೆ. ಈ ದೋರಣೆ ಅತ್ಯಂತ ಖಂಡನೀಯ ಎಂದರು.

ರಾಜ್ಯ ಕಾರ್ಯಾಧ್ಯಕ್ಷ ಮತ್ತಿಕುಂಟೆ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ವೇಮಗಲ್ ವಿಜಯಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪುರಹಳ್ಳಿ ಚಲಪತಿ, ಗೌರವಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ವೇಮಗಲ್ ಸುಧಾಕರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರೀಫ್ ವುಲ್ಲಾ (ಬಾಬು), ಜಿಲ್ಲಾ ಕಾರ್ಯಾಧ್ಯಕ್ಷ ಚನ್ನಪ್ಪನಹಳ್ಳಿ ಚಂದ್ರಶೇಖರ್, ಉಪಾಧ್ಯಕ್ಷ ಮಠಪುರ ವೆಂಕಟರಾಮ್, ತಾಲೂಕು ಅಧ್ಯಕ್ಷ ರಾಜಕಲ್ಲಹಳ್ಳಿ ಶ್ರೀನಿವಾಸ್, ಕೆ.ಬಿ.ಹೊಸಹಳ್ಳಿ ಗ್ರಾಮದ ಕೆ.ವೈ.ಮುನಿನಾರಾಯಣಸ್ವಾಮಿ, ನಾಗರಾಜ್, ಲಕ್ಷಿö್ಮÃಸಾಗರ ಬಸವರಾಜ್, ವೇಮಗಲ್ ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷö್ಮಮ್ಮ ಇನ್ನಿತರರು ಉಪಸ್ಥಿತರಿದ್ದರು.

ಚಿತ್ರ ೦೫ ಕೆ.ಎಲ್.ಆರ್.೦೨ : ಕ್ರಷರ್‌ಗಳಿಂದ ಕೆ.ಬಿ.ಹೊಸಹಳ್ಳಿ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ಗೌಡ ವಣಿಕ್ಯಾಳ್ ರವರಿಗೆ ಮನವಿ ಸಲ್ಲಿಸುತ್ತಿರುವ ಜಯಭೀಮ್ ಸಂಘಟನೆಯವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net