ತೂಬಗೆರೆಯಲ್ಲಿ ಅಕ್ರಮ ಗುಡಿಸಲುಗಳ ಎತ್ತಂಗಡಿ

Elevation of illegal huts
Elevation of illegal huts
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ತೂಬಗೆರೆಯ ಗ್ರಾಮಠಾಣಾ ಜಾಗದಲ್ಲಿ ಅನಧಿಕೃತವಾಗಿ ತಲೆಎತ್ತಿದ್ದ ದಲಿತರ ಗುಡಿಸಲುಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ತೆರವು ಮಾಡಲಾಯಿತು.
ಗ್ರಾಮಠಾಣಾ ಜಾಗದಲ್ಲಿ 2 ತಿಂಗಳಿಂದ 8 ದಲಿತ ಕುಟುಂಬ ಗುಡಿಸಲು ನಿರ್ಮಿಸಿಕೊಂಡಿದ್ದವು. ಗ್ರಾಮಠಾಣಾ ಜಾಗವಾದ ಹಿನ್ನೆಲೆಯಲ್ಲಿ ಗ್ರಾಪಂನಿಂದ ತೆರವು ಕಾರ್ಯಾಚರಣೆ ಮಾಡಲಾಯಿತು ಎಂದು ಪಿಡಿಒ ವೆಂಕಟೇಶ್ ತಿಳಿಸಿದರು.
ಮನೆ ಕೊಟ್ಟು ಗುಡಿಸಲು ತೆರವು ಮಾಡಿ:
ಈ ವೇಳೆ ದಲಿತರು, ನಮಗೆ ಮನೆ ಇಲ್ಲ, ಮನೆ ಕೊಟ್ಟ ಬಳಿಕ ಗುಡಿಸಲು ತೆರವು ಮಾಡಿ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ಹಿನ್ನೆಲೆಯಲ್ಲಿ ದಲಿತ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಯಿತು. ಶೀಘ್ರ ವಸತಿರಹಿತರಿಗೆ ನಿವೇಶನ ಮಂಜೂರು ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಪಂಚಾಯಿತಿಯಲಲ್‌ಇ ಹಣ ಕೊಟ್ಟವರಿಗೆ ಮಾತ್ರ ನಿವೇಶನ ಮಾಡಿಕೊಡುತ್ತಾರೆ. ಸುಮ್ಮನೆ ನಮಗೇಕೆ ತೊಂದರೆ ಕೊಡುತ್ತಿದ್ದೀರಿ. ಅಧಿಕಾರಿಗಳ ನಡೆ ಸರಿಯಲ್ಲ ಎಂದು ದಲಿತ ಮುಖಂಡ ನರಸಿಂಹಮೂರ್ತಿ ವಾಗ್ವಾದ ನಡೆಸಿದರು. ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮಗೆ ಸೂರು ಇಲ್ಲದೆ ಗ್ರಾಮಠಾಣಾ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದೇವೆ, ಏಕಾಏಕಿ ಬಂದು ದೌರ್ಜನ್ಯ ಎಸಗಿದ್ದಾರೆ. ನಮಗೆ ನ್ಯಾಯ ಕೊಡುವವರು ಯಾರು? ನಮಗೆ ಮನೆ ಇಲ್ಲ ಎಂದು ದಲಿತ ಮುಖಂಡ ನರಸಿಂಹಮೂರ್ತಿ ಅಲವತ್ತುಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net