ಅಂಬೇಡ್ಕರ್ ರವರ ಜ್ಞಾನದ ಹಸಿವು ಅವರನ್ನು ದೊಡ್ಡ ಮಟ್ಟಕ್ಕೆ ಕರೆದೊಯ್ಯಲು ಸಾಧ್ಯವಾಯಿತು / ಫ್ರೊ|| ನಿರಂಜನ ವಾನಳ್ಳಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಹೋರಾಟದ ಜ್ಞಾನದ ಹಸಿವು ಅಂಬೇಡ್ಕರ್ ರವರನ್ನು ದೊಡ್ಡ ಮಟ್ಟಕ್ಕೆ ಕರೆದೊಯ್ಯಲು ಸಾಧ್ಯವಾಯಿತು. ಬ್ರಿಟೀಷರು ಭಾರತದಿಂದ ಸಂಪತ್ತನ್ನು ಕೊಂಡೊಯ್ದರೆ ಅಂಬೇಡ್ಕರ್ ರವರು ಅಲ್ಲಿಂದ ಭಾರತಕ್ಕೆ ಪುಸ್ತಕಗಳ ಭಂಡಾರವನ್ನು ಹೊತ್ತು ತಂದರು. ಎಲ್ಲಾ ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡಿ ಸಹಿ ಮಾಡುತ್ತಿದ್ದರು. ಹಾಗಾಗಿ ನಾವೆಲ್ಲರೂ ಅಂಬೇಡ್ಕರ್ ರವರಿಗೆ ಇದ್ದ ಓದಿನ ಹಸಿವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಕುಲಸಚಿವ ಪ್ರೋ.ನಿರಂಜನ ವಾನಳ್ಳಿ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಮಂಗಸAದ್ರದಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತಿ ಕುಲಪತಿ ಮಲ್ಲೆಪುರಂ ಜಿ.ವೆಂಕಟೇಶ ರವರ ಮಾತನಾಡಿ, ಅಂಬೇಡ್ಕರ್ ರವರ ವಿವಿದ ಜ್ಞಾನ ಶಿಸ್ತುಗಳನ್ನು ಪರಿಚಯಿಸಿದರಲ್ಲದೆ ಹಿಂದೂ ಕೋಡ್ ಬಿಲ್ ಅಂಗೀಕಾರ ಆಗದೇ ಇದ್ದಾಗ ತನ್ನ ಮಂತ್ರಿಗಿರಿಗೆ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ ಅಂಬೇಡ್ಕರ್ ರವರಾಗಿದ್ದರು. ಅವರಿಗಿದ್ದ ಜ್ಞಾನದ ಹಸಿವು ಎಲ್ಲರಿಗೂ ಇರಬೇಕು. ಹೊರಗಡೆ ಅಂಬೇಡ್ಕರ್ ಜ್ಯೋತಿ ಹಚ್ಚಿದ್ದೇವೆ ಅದು ಎಲ್ಲಾ ವಿದ್ಯಾರ್ಥಿಗಳ ಹೃದಯದಲ್ಲಿ ಸದಾ ಉರಿಯುವಂತೆ ನೋಡಿಕೊಳ್ಳಬೇಕು ಎಂದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಜನಪದ ಗಾಯಕಿ ಮುನಿವೆಂಕಟಮ್ಮನವರಿAದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರಿಂದ ಅಂಬೇಡ್ಕರ್ ಬಗ್ಗೆ ಹಾಡುಗಳನ್ನು ಕಟ್ಟಿ ಹಾಡಿಸಿದರು.

ಕುಲಸಚಿವರಾದ ಸಿಎನ್ ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ.ಲೋಕನಾಥ್, ಪಿಜಿ ಸೆಂಟರ್ ನಿರ್ದೇಶಕರಾದ ಪ್ರೊ.ಕಮುದಾ, ಹಣಕಾಸು ಅಧಿಕಾರಿಗಳಾದ ಬಿವಿ ವಸಂತಕುಮಾರ್, ಸಿಂಡಿಕೇಟ್ ಸದಸ್ಯರು, ಎಲ್ಲಾ ವಿಭಾಗಗಳ ಅದ್ಯಾಪಕರುಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೧ : ಬೆಂಗಳೂರು ವಿಶ್ವ ವಿದ್ಯಾಲಯ ಮಂಗಸAದ್ರ ವಿಶ್ವ ವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿಯನ್ನು ಜಾನಪದ ಗಾಯಕಿ ಮುನಿವೆಂಕಟಮ್ಮ ರವರಿಂದ ಉದ್ಘಾಟಿಸಿದರು. ಕುಲಸಚಿವ ಪ್ರೋ.ನಿರಂಜನ ವಾನಳ್ಳಿ, ವಿಶ್ರಾಂತಿ ಕುಲಪತಿ ಮಲ್ಲೆಪುರಂ ಜಿ.ವೆಂಕಟೇಶ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net