ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡಿ

13sri-3 manavi
ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿ ಮಾಡಬೇಕು ಎಂದು ದಲಿತ ಮುಖಂಡರು ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಅವರಿಗೆ ಮನವಿ ಸಲ್ಲಿಸಿದರು. ಶಶಿಕಲಾ, ಗೀತಾ, ಸುಶೀಲಾ, ಸಿದ್ಧಾರ್ಥ ಇದ್ದರು.
Published on

ಶೃಂಗೇರಿ: ಮೆಣಸೆ ಗ್ರಾಪಂ ವ್ಯಾಪ್ತಿಯ ಹಾಲಂದೂರು ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ, ಗ್ರಂಥಾಲಯ ಮತ್ತು ಆಟದ ಮೈದಾನಕ್ಕಾಗಿ ಸರ್ವೇ ನಂ-155ರಲ್ಲಿ ಒಂದು ಎಕರೆ ಜಾಗ ಮಂಜೂರಾತಿ ಮಾಡಬೇಕು ಎಂದು ಸೋಮವಾರ ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಅವರಿಗೆ ದಲಿತ ಮುಖಂಡರು ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ದಲಿತ ಮುಖಂಡ ಗೌತಮ್ ಮಾತನಾಡಿ, ಹಾಲಂದೂರು ಗ್ರಾಮದಲ್ಲಿ ಸುಮಾರು 90 ಕುಟುಂಬಗಳು ವಾಸವಾಗಿದ್ದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂಬ ಆಶಯ ನಮ್ಮದಾಗಿದೆ ಎಂದರು. ಹಾಲಂದೂರು ಗ್ರಾಮ ನಿವಾಸಿಗಳಾದ ಸಿದ್ಧಾರ್ಥ, ಗುಂಡಪ್ಪ, ಸುಶೀಲ, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net