ವಿಜಯವಾಣಿ ಸುದ್ದಿಜಾಲ ಕೋಲಾರ
ಇ ಯಂತ್ರ, ಐಐಟಿ ಬಾಂಬೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ವರ್ಚುವಲ್ ಮ್ಯೂಸಿಯಂ ಸ್ಪರ್ಧೆಯಲ್ಲಿ ಭಾಗವಹಿಸಿದ ನಗರದ ವಿ.ಎಂ.ಸಾಯಿ ಅನೀಶ್ ೩ನೇ ಬಹುಮಾನ ಪಡೆದುಕೊಂಡಿದ್ದಾನೆ.
sಸಾಯಿ ಅನಿಶ್ ಅವರ ಕಲಾಕೃತಿ ಹಂಪಿಯ ಕಲ್ಲಿನ ರಥ. ವರ್ಚುವಲ್ ಮ್ಯೂಸಿಯಂ ರಚಿಸಲು ಅವರು ವಿವಿಧ ಅಪ್ಲಿಕೇಶನ್‌ಗಳನ್ನು ಬಳಸಿದರು. ಪ್ರಪಂಚದಾದ್ಯAತ ಸುಮಾರು ೧೦೦೦ ವಿದ್ಯಾರ್ಥಿಗಳು ಮತ್ತು ೫೭ ಶಾಲೆಗಳು ಮ್ಯೂಸಿಯಂ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
೧ ಮತ್ತು ೨ ನೇ ಬಹುಮಾನವನ್ನು ಭೂತಾನ್ ಶಾಲೆಗಳ ವಿದ್ಯಾರ್ಥಿಗಳು ಪಡೆದುಕೊಂಡರು. ವಿ.ಎಂ.ಸಾಯಿ ಅನೀಶ್ ಕೋಲಾರದ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ೮ನೇ ತರಗತಿ ಓದುತ್ತಿದ್ದಾನೆ. ಕೋಲಾರದ ಜಯನಗರ ೩ನೇ ಕ್ರಾಸ್‌ನಲ್ಲಿ ವಾಸವಾಗಿರುವ ಶ್ರೀಮತಿ ದಿವ್ಯಾ ಮತ್ತು ಶ್ರೀ ಮಹೇಶ್ ದಂಪತಿಗಳ ಪುತ್ರನಾಗಿದ್ದಾನೆ.
ಚಿತ್ರ ೨೭ ಕೆ.ಎಲ್.ಆರ್ ೦೫ : ಸಾಯಿ ಅನಿಶ್ ರವರ ಭಾವಚಿತ್ರ
ಚಿತ್ರ ೨೭ ಕೆ.ಎಲ್.ಆರ್ ೦೫ಎ : ಸಾಯಿ ಅನಿಶ್ ರವರು ವಿವಿಧ ಅಪ್ಲಿಕೇಶನ್‌ಗಳ್ಲಿ ಹಂಪಿಯ ಕಲ್ಲಿನ ರಥ ತಯಾರಿಸಿರುವುದು.