ಅಂತರಜಿಲ್ಲಾ ಕಳ್ಳರ ಬಂಧನ 4.87 ಲಕ್ಷ ಮೌಲ್ಯದ ಸ್ವತ್ತು ವಶ

IMG-20220913-WA0066.jpg
Published on

ದಾವಣಗೆರೆ: ತಾಲೂಕಿನ ಆರನೇ ಕಲ್ಲು ಮತ್ತು ತುರ್ಚಗಟ್ಟ ಗ್ರಾಮದಲ್ಲಿ ರಾತ್ರಿ ಕಳವು ಪ್ರಕರಣದ ನಾಲ್ವರು ಅಂತರಜಿಲ್ಲಾ ಕಳ್ಳರನ್ನು ಹದಡಿ ಠಾಣೆ ಪೊಲೀಸರು ಬಂಧಿಸಿದ್ದು, ಚಿನ್ನ-ಬೆಳ್ಳಿ ಆಭರಣ, ಪ್ಯಾಸೆಂಜರ್ ಆಟೋ ಸಹಿತ 4.87 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಮೂಲದ ರಮೇಶ, ಮನು ಆಲಿಯಾಸ್ ಮನೋಜ, ರೇಣುಕ ಆಲಿಯಾಸ್ ರೇಣು, ದಾವಣಗೆರೆಯ ಪ್ರಮೋದ ಬಂಧಿತರಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ದಾವಣಗೆರೆ ಗ್ರಾಮಾಂತರ ಎಎಸ್ಪಿ ಕನ್ನಿಕಾ ಸಿಕ್ರಿವಾಲ್, ಮಾಯಕೊಂಡ ಸಿಪಿಐ ತಿಮ್ಮಣ್ಣ ನೇತೃತ್ವದಲ್ಲಿ ಹದಡಿ ಠಾಣೆ ಪಿಎಸ್‌ಐ ಸಂಜೀವ್‌ಕುಮಾರ್ ಹಾಗೂ ಅವರ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net