ಅಂಚೆ ಮಹಾ ಉದ್ಯಮ ಸಪ್ತಾಹ: ಸೆಪ್ಟೆಂಬರ್ 8 ರಿಂದ 13 ರವರೆಗೆ ವಿಶೇಷ ಅಭಿಯಾನ

mnd Check post
Published on

ಅಂಚೆ ಇಲಾಖೆ ತನ್ನ ಸೇವೆಗಳ ವ್ಯಾಪ್ತಿ ವಿಸ್ತರಿಸಿ ಮಹಾ ಉದ್ಯಮ ಸಪ್ತಾಹವನ್ನು ಸೆಪ್ಟೆಂಬರ್ 8 ರಿಂದ 13 ರವರೆಗೆ ನಂಜನಗೂಡು ವಿಭಾಗದಲ್ಲಿ ಆಯೋಜಿಸಲಾಗಿದ್ದು, ಈ ವಿಶೇಷ ಅಭಿಯಾನದಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ವ್ಯಾಪಾರಿಕ ಸಂಸ್ಥೆಗಳು ಮತ್ತು ಉದ್ಯಮಿಗಳು, ಇ-ಕಾಮರ್ಸ್ ಮಾರಾಟಗಾರರು ಮತ್ತು ಸ್ಮಾರ್ಟ್ಅಪ್ಸ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಸೇರಿದಂತೆ ಸಾಮಾನ್ಯ ಗ್ರಾಹಕರವರೆಗೂ ವಿವಿಧ ವರ್ಗಗಳನ್ನು ಅಂಚೆ ಸೇವೆಗಳೊಂದಿಗೆ onboarding ಮಾಡಲಾಗುತ್ತದೆ.

ಸಪ್ತಾಹದ ಅವಧಿಯಲ್ಲಿ ಸ್ಪೀಡ್ ಪೋಸ್ಟ್ ಪಾರ್ಸೆಲ್ ಮತ್ತು COD ಸೇವೆಗಳ ಪ್ರಚಾರ ನಡೆಯುವುದರ ಜೊತೆಗೆ ಹೊಸ ಗ್ರಾಹಕರಿಗೆ ಅಂಚೆ ಇಲಾಖೆಯ ಸೇವೆಗಳ ಪರಿಚಯ ಮಾಡಿಕೊಡಲಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳೊAದಿಗೆ ಹೊಸ ಒಡಂಬಡಿಕೆಗಳನ್ನು ಸ್ಥಾಪಿಸಿ ಸ್ಥಳೀಯ ಉತ್ಪನ್ನಗಳನ್ನು ರಾಷ್ಟ್ರೀಯ ಮಟ್ಟದ ಮಾರುಕಟ್ಟೆಗೂ ತಲುಪಿಸುವ ಅವಕಾಶ ಕಲ್ಪಿಸಲಾಗುತ್ತದೆ.

 ಈ ಅಭಿಯಾನದಿಂದ ಗ್ರಾಹಕರು ಹಲವು ರೀತಿಯ ಅನುಕೂಲಗಳನ್ನು ಪಡೆಯುತ್ತಾರೆ. ದಾಖಲೆಗಳು ಮತ್ತು ಪಾರ್ಸೆಲ್‌ಗಳು ವೇಗವಾಗಿ, ವಿಶ್ವಾಸಾರ್ಹವಾಗಿ ಮತ್ತು ನಂಬಿಕೆಯೊAದಿಗೆ ಗುರಿಯ ತಲುಪುವ ಭರವಸೆ ಲಭ್ಯವಾಗುತ್ತದೆ. ವ್ಯಾಪಾರ ವೃದ್ಧಿಗಾಗಿ ಅಔಆ ಸೇವೆಗಳ ಮೂಲಕ ಇ-ಕಾಮರ್ಸ್ ಮಾರಾಟಗಾರರು ಹಾಗೂ ಸ್ಮಾರ್ಟ್ ಅಪ್ಸ್ ಗಳಿಗೆ ದೇಶವ್ಯಾಪಿ ವ್ಯಾಪಾರ ವಿಸ್ತರಣೆ ಸಾಧ್ಯವಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಸಮಯಪ್ರಜ್ಞೆಯ ಸೇವೆಗಳು ದೊರೆತು ಕೆಲಸದ ಪರಿಣಾಮ ಕಾರಿತ್ಯ ಹೆಚ್ಚುತ್ತದೆ. ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಪತ್ರ ವ್ಯವಹಾರ ಸುರಕ್ಷಿತವಾಗಿ ಹಾಗೂ ವಿಳಂಬವಿಲ್ಲದೆ ತಲುಪುತ್ತದೆ. ಸ್ಥಳೀಯ ಉತ್ಪನ್ನಗಳಿಗೆ ದೇಶವ್ಯಾಪಿ ಮಾರುಕಟ್ಟೆ ತಲುಪುವ ದಾರಿ ತೆರೆದುಕೊಳ್ಳುತ್ತದೆ. ಸಾಮಾನ್ಯ ಗ್ರಾಹಕರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಮನೆ ಬಾಗಿಲಲ್ಲೇ ವಿಶ್ವಾಸಾರ್ಹ ಅಂಚೆ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

 ನಂಜನಗೂಡು ವಿಭಾಗದ ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ವ್ಯಾಪಾರಿಕ ಸಂಸ್ಥೆಗಳು, ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಮಹಾ ಉದ್ಯಮ ಸಪ್ತಾಹದಲ್ಲಿ ಪಾಲ್ಗೊಂಡು ಅಂಚೆ ಇಲಾಖೆಯ ವಿಶ್ವಾಸಾರ್ಹ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net