ಅಂಗವಿಕಲರ ಸಬಲೀಕರಣಕ್ಕೆ ಸುಗಮ್ಯ ಯಾತ್ರಾ ಜಾಥಾ

CTD SUGAMAY YATRE---
Published on

ಚಿತ್ರದುರ್ಗ: ಅಂಗವಿಕಲರ ಸಬಲೀಕರಣ ಉತ್ತೇಜಿಸಲು ನಗರದಲ್ಲಿ ಬುಧವಾರ 'ಸುಗಮ್ಯ ಯಾತ್ರಾ' ಅರಿವು ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಹಾಗೂ ದಿ ಅಸೋಷಿಯೇಷನ್ ಆಫ್ ಪೀಪಲ್‌ವಿತ್ ಡಿಸೆಬಿಲಿಟಿ(ಎಪಿಡಿ)ಸಂಯುಕ್ತಾಶ್ರಯದಲ್ಲಿ ಸುಗಮ್ಯಯಾತ್ರೆ ಪ್ರತಿ ಹೆಜ್ಜೆ ಸಮಾನತೆ ಕಡೆಗೆ ಎಂಬ ಘೋಷಣೆ ಯೊಂದಿಗೆ ಜಾಥಾ ನಡೆಯಿತು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಒನಕೆ ಓಬವ್ವ ವೃತ್ತದಲ್ಲಿ ಚಾಲನೆ ನೀಡಿದರು. ಮದಕರಿ ನಾಯಕ ವೃತ್ತ, ಸ್ಟೇಡಿಯಂ ರಸ್ತೆ ಮೂಲಕ ಜಿಲ್ಲಾ ಬಾಲಭವನದವರೆಗೂ ಜಾಥಾ ಸಾಗಿತು. ಎಲ್ಲರಿಗೂ ಸಮಾನ ಅವಕಾಶ-ಸುಗಮ್ಯಯಾತ್ರೆ ನಮ್ಮ ಹಕ್ಕು, ಸುಗಮ್ಯ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಒಟ್ಟಾಗಿ ನಡೆಯೋಣ ಇ ತ್ಯಾದಿ ಘೋಷಣೆಗಳ ಜಾಗೃತಿ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಾತನಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಸಾರ್ವಜನಿಕ ಕಟ್ಟಡ, ಬ್ಯಾಂಕ್, ಗ್ರಂಥಾಲಯ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು, ಮನರಂಜನೆ ಸ್ಥಳ, ಉದ್ಯಾನ, ಮಾರುಕಟ್ಟೆ, ಪ್ರವಾಸಿತಾಣ ಮತ್ತು ಸಾರ್ವಜನಿಕ ಶೌಚಗೃಹಗಳು ಅಂಗವಿಕಲರಿಗೆ ಅನು ಕೂಲವಾಗುವಂತಿರಬೇಕು. ಅಡೆ-ತಡೆ ರಹಿತ ವಾತಾವರಣ, ಮೂಲ ಸೌಲಭ್ಯಗಳನ್ನು ಹೊಂದಿರುವ ಬಗ್ಗೆ ಸಾಮಾಜಿಕ ಪರಿಶೋಧನೆಯನ್ನು (ಛಿ ಠಿಟ ಚ್ಚ್ಚಛಿ ಟ್ಝಜ್ಚಿಠಿಜಿಟ್ಞ ಆ್ಯಪ್ ಮೂಲಕ ಮಾಹಿತಿ ಸಂಗ್ರಹ) ಗ್ರಾಮೀಣ, ನಗರ, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಈ ಯಾತ್ರೆ ಮೂಲಕ ಜನರಲ್ಲಿ ಅರಿವು ಮೂಡಿಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಸಾಮಾನ್ಯ ನಾಗರಿಕರು ಆ್ಯಪ್ ಡೌನ್‌ಲೋಡ್‌ಮಾಡಿಕೊಂಡು ಮಾಹಿತಿ ಸಂಗ್ರಹಿಸಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ಶಂಕರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net