

ಸೊರಬ: ವಿಶ್ವರೂಪಿಣಿ ಶ್ರೀ ವಾಸವಿ ಚಿತ್ರ ರಾಜ್ಯಾದ್ಯಂತ ಅ.10ರಂದು ಬಿಡುಗಡೆಗೊಳ್ಳಲಿದ್ದು ಶ್ರೀ ವಾಸವಿ ದೇವಿಯ ಕುರಿತ ಪೌರಾಣಿಕ ಚಿತ್ರವಾಗಿದೆ ಎಂದು ಹಿರಿಯ ನಟ ಡಾ. ನಾಗೇಶ್ವರ್ ವಿಜಾಪುರ ತಿಳಿಸಿದರು.
ತಾಲೂಕಿನ ಆನವಟ್ಟಿ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದಿಂದ ವಿಶ್ವರೂಪಿಣಿ ಶ್ರೀ ವಾಸವಿ ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
60 ವರ್ಷಗಳ ಹಿಂದೆ ಈ ಚಿತ್ರವು ಡಾ. ರಾಜ್‌ಕುಮಾರ್ ಹಾಗೂ ದಿ.ಲೀಲಾವತಿ ಅವರ ಅಭಿನಯದಲ್ಲಿ ಮೂಡಿಬಂದಿತ್ತು. ಪ್ರಸ್ತುತ ಬಿ.ಎಂ.ಪ್ರಸಾದ್ ನಿರ್ಮಾಣದಲ್ಲಿ, ವೇಮಗಲ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಪಾರ್ವತಿ ಅವತಾರದ ವಾಸುಕಿ ದೇವಿಯ ಮಹಿಮೆಯನ್ನು ಈ ಚಿತ್ರದಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಸತತ ಒಂದು ತಿಂಗಳ ಕಾಲ ಬೆಂಗಳೂರು ನಗರದಲ್ಲಿ ಚಿತ್ರವನ್ನು ಚಿತ್ರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾವೇರಿ ಆರ್ಯವೈಶ್ಯ ಸಮಾಜದ ಜಿಲ್ಲಾಧ್ಯಕ್ಷ ಮಾಲತೇಶ್ ಹೆಗಡೆಕಟ್ಟಿ, ಸಮಾಜಸೇವಕ ಕಾರ್ತಿಕ್ ಸಾಹುಕಾರ್, ವಾಸವಿ ಮಹಿಳಾ ಸಮಾಜದ ಪದ್ಮಾ, ನವನಿರ್ಮಾಣ ಕಟ್ಟಡ ಕಾರ್ಮಿಕರ ತಾಲೂಕು ಕಾರ್ಯದರ್ಶಿ ಗುಡ್ಡಪ್ಪ ಎಸ್. ಹುರುಳಿಕೊಪ್ಪ, ಜಿಲ್ಲಾ ಯೋಜನಾ ಸಂಘದ ಅಧ್ಯಕ್ಷ ಸಂಪತ್, ಬಸವನಗೌಡ, ಅಭಿಲಾಷ್ ಹುರುಳಿಕೊಪ್ಪ, ಅಸಂಘಟಿತ ಕಾರ್ಮಿಕ ಸಂಘದ ಕಾರ್ಯದರ್ಶಿ ಶಿವಲಿಂಗಣ್ಣ, ಸ್ನೇಹಾ ಮನೋಹರ್, ಜ್ಯೋತಿ ಇದ್ದರು.