ಜುಬೀನ್ ಗಾರ್ಗ್ ಸಾವು ಪ್ರಕರಣ; ಜುಬೀನ್ ಮ್ಯಾನೇಜರ್ ಮತ್ತು ಈಶಾನ್ಯ ಭಾರತ ಉತ್ಸವ ಆಯೋಜಕರಿಗೆ ಸಮನ್ಸ್| Zubeen Garg

Untitled design - 2025-09-27T112857.104
Published on

Zubeen Garg: ಖ್ಯಾತ ಬಾಲಿವುಡ್ ಮತ್ತು ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಸಿಂಗಾಪುರದಲ್ಲಿ ಸಾವನ್ನಪ್ಪಿದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್​ಐಟಿ) ಅವರ ಮ್ಯಾನೇಜರ್ ಸಿದ್ದಾರ್ಥ್ ಶರ್ಮಾ ಮತ್ತು ಈಶಾನ್ಯ ಭಾರತ ಉತ್ಸವ ಆಯೋಜಕ ಶ್ಯಾಮಕಾನು ಮಹಾಂತಗೆ ಅ.6ರೊಳೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ಶನಿವಾರ(ಸೆ. 27) ವರದಿಯಾಗಿದೆ.

ಸೆ. 19ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಸ್ಕೈಬಾ ಡೈವಿಂಗ್ ವೇಳೆ ಉಸಿರುಗಟ್ಟಿ ಜುಬೀನ್ ಸಾವನ್ನಪ್ಪಿದ್ದರು. ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಅವರು ಅಲ್ಲಿಗೆ ಹೋಗಿದ್ದರು. ಆದರೆ ಪ್ರದರ್ಶನ ನೀಡುವ ಮೊದಲೇ ಸಾವನ್ನಪ್ಪಿದ್ದರು.

ಜುಬೀನ್ ಜೊತೆ ಸ್ಕೂಬಾ ಡೈವಿಂಗ್ ಮಾಡಿದ್ದ ಬ್ಯಾಂಡ್​ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಸೇರಿ ಅಸ್ಸಾಂನ 12ಕ್ಕೂ ಹೆಚ್ಚು ಜನರಿಗೆ ಸಮನ್ಸ್​ ಜಾರಿ ಮಾಡಿದೆ. ಶುಕ್ರವಾರ ಮಹಾಂತ ಅವರ ನಿವಾಸದ ಮೇಲೆ ಸತತ ಎರಡನೇ ದಿನವೂ ದಾಳಿ ನಡೆಸಿದ್ದ ಎಸ್‌ಐಟಿ, ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಜುಬೀನ್ ಗಾರ್ಗ್​ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಿ ಅಸ್ಸಾಂನಾದ್ಯಂತ ಅನೇಕ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ರಾಜ್ಯದ ಜನರಿಗೆ ಯಾರನ್ನೂ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಈ ಕುರಿತು ಗುರುವಾರ ಮಾತನಾಡಿದ್ದ ಅವರು, ಸಿದ್ದಾರ್ಥ್ ಶರ್ಮಾ ಮತ್ತು ಶ್ಯಮಕಾನು ಮಹಾಂತ ಅವರ ಕಾರ್ಯಕ್ರಮಗಳು ಅಸ್ಸಾಮಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ. ಅದಕ್ಕಾಗಿಯೇ ನಾನು ಅವುಗಳಿಗೆ ಎಂದಿಗೂ ಹಾಜರಾಗಲಿಲ್ಲ. ರಾಜ್ಯ ಸರ್ಕಾರವು ಅವುಗಳಿಗೆ ಯಾವುದೇ ಬೆಂಬಲವನ್ನು ನೀಡದಿರಲು ನಿರ್ಧರಿಸಿದೆ ಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net