ಉದ್ಯೋಗಿಗಳ ಬಳಿಕ ಅಧ್ಯಕ್ಷನನ್ನೂ ವಜಾಗೊಳಿಸಿದ ಜೂಮ್ ಕಂಪನಿ

zoom
Published on

ವಾಷಿಂಗ್ಟನ್: ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಜೂಮ್ ಇತ್ತೀಚೆಗಷ್ಟೇ ಕಂಪನಿ ತನ್ನ 1,300 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ತನ್ನ ಅಧ್ಯಕ್ಷ ಗ್ರೆಗ್ ಟಾಂಬ್ ಅವರನ್ನು ವಜಾಗೊಳಿಸಿದೆ.

ಟಾಂಬ್ 2022ರ ಜೂನ್ ತಿಂಗಳಿನಲ್ಲಿ ಜೂಮ್‌ಗೆ ಸೇರ್ಪಡೆಯಾಗಿದ್ದರು. ಕಂಪನಿ 10 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೇರಿದ್ದ ಟಾಂಬ್‌ರನ್ನು ಹಠಾತ್ತನೆ ವಜಾಗೊಳಿಸಿದೆ. ಟಾಂಬ್ ಉದ್ಯಮಿ ಹಾಗೂ ಈ ಹಿಂದೆ ಗೂಗಲ್‌ನಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಜೂಮ್‌ನ ಮುಂದಿನ ಅಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ನಿರ್ಧಾರವಾಗಿಲ್ಲ.

ಜೂಮ್ ಕಂಪನಿ 2011ರಲ್ಲಿ ಸ್ಥಾಪನೆಯಾಗಿದ್ದು, ಕೋವಿಡ್ ಕಾಲದಲ್ಲಿ ಲಾಕ್‌ಡೌನ್ ವೇಳೆ ಕಂಪನಿಗಳ ಮೀಟಿಂಗ್ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಜೂಮ್ ಅತ್ಯಂತ ಉಪಯುಕ್ತವಾಗಿತ್ತು. ಇದೀಗ  ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಕಂಪನಿಯನ್ನು ಆರ್ಥಿಕವಾಗಿ ನಿಭಾಯಿಸಲು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net