

ಮಹಾರಾಷ್ಟ್ರ: ಅಕ್ಕಪಕ್ಕದ ಮನೆಯವರು ಎಂದರೆ ಜಗಳ ಸರ್ವೆಸಾಮಾನ್ಯ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮನೆ ಬಾಗಿಲ ಬಳಿ ಚಪ್ಪಲಿ ಇಡುವ ವಿಚಾರದಲ್ಲಿನ ಜಗಳದಲ್ಲಿ ದಂಪತಿ ಪಕ್ಕದ ಮನೆಯವರನ್ನ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಅಪ್ಸರ್ ಖಾತ್ರಿ (54) ಮೃತ. ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ಓರ್ವ ವ್ಯಕ್ತಿಯನ್ನು ದಂಪತಿ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೀರಾ ರೋಡ್ ಪೂರ್ವದ ನಯಾ ನಗರದಿಂದ ಮಹಿಳೆಯನ್ನು ಬಂಧಿಸಲಾಗಿದೆ ಆದರೆ ಆಕೆಯ ಪತಿ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.
ದಂಪತಿ ಪರಸ್ಪರರ ಬಾಗಿಲಿನ ಬಳಿ ಚಪ್ಪಲಿ ಇಡುವುದಕ್ಕಾಗಿ ತಮ್ಮ ನೆರೆಹೊರೆಯವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದು ಅತಿರೇಖಕ್ಕೆ ಹೋಗಿ ಅಪ್ಸರ್ ಹಾಗೂ ದಂಪತಿ ಮಧ್ಯೆ ಹೊಡೆದಾಟ ನಡೆದಿದೆ. ಈ ವೇಳೆ ಆತನನನ್ನು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ನಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.