* ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ

HUN-AUG-25-1(GAVADAGERE ZONE LEVEL SPORTS)
ಹುಣಸೂರು ತಾಲೂಕು ಗಾವಡಗೆರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗಾವಡಗೆರೆ ಕೆಪಿಎಸ್ ಶಾಲೆ ಸಮಗ್ರ ಪ್ರಶಸ್ತಿ ಗಳಿಸುವ ಮೂಲಕ ಸಾಧನಗೈದಿದೆ. ಶಾಲೆಯ ಉಪಪ್ರಾಂಶುಪಾಲ ಸಿದ್ದರಾಜು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಮಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಇತರರಿದ್ದರು.
Published on

ಹುಣಸೂರು: ಗಾವಡಗೆರೆ ವಲಯ ಮಟ್ಟದ 2025-26ನೇ ಸಾಲಿನ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಗಾವಡಗೆರೆ ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ಹರವೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ ಕೆಪಿಎಸ್ ಶಾಲೆ ಬಾಲಕರ ಕಬಡ್ಡಿ, ವಾಲಿಬಾಲ್, ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಂಟನ್, ಥ್ರೋ ಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕಬಡ್ಡಿಯಲ್ಲಿ ಪ್ರಥಮ, ಖೋ ಖೋದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಪೃಥ್ವಿ ಎಂ.ಎಸ್. ಗುಂಡು ಎಸೆತ, ಚಕ್ರ ಎಸೆತ, ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. ಗೌತಮ್ 800 ಮೀ. ಮತ್ತು 1500 ಮೀ. ಓಟದಲ್ಲಿ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಮಹಿಳೆಯರ ವಿಭಾಗ ಮಾನಸಾ 200 ಮೀ. ದ್ವಿತೀಯ, ರವಿನಂದನ್ ಪುರುಷರ ವಿಭಾಗ 200 ಮೀ. ದ್ವಿತೀಯ, ಪ್ರಮೋದ್ 400 ಮೀ. ದ್ವಿತೀಯ, ಪೃಥ್ವಿ ನಾಯಕ 3000 ದ್ವಿತೀಯ, ಸುನಿಲ್‌ಕುಮಾರ್ ಉದ್ದ ಜಿಗಿತ ತೃತೀಯ, ಬಾಲಕರ 4*4 ರಿಲೇ ವಿಭಾಗದಲ್ಲಿ ಪ್ರಥಮ, ಬಾಲಕಿಯರ 4*100 ರಿಲೇಯಲ್ಲಿ ದ್ವಿತೀಯ, 4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕ್ರೀಡಾಪಟುಗಳ ಸಾಧನೆಯನ್ನು ಶಾಲೆಯ ಉಪ ಪ್ರಾಂಶುಪಾಲ ಸಿದ್ದರಾಜು, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ್, ನಿತ್ಯಾನಂದ ಪಟಗಾರ್, ಸಹಶಿಕ್ಷಕರು ಹಾಗೂ ಎಸ್‌ಡಿಎಂಸಿ ಯವರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net