ರಾಜ್ಯದ ಜೇನುತುಪ್ಪಕ್ಕೆ ‘ಝೇಂಕಾರ’ ಹೆಸರು: ತೋಟಗಾರಿಕೆ ಇಲಾಖೆಗೆ ಬ್ರ್ಯಾಂಡ್ ಮಾಲೀಕತ್ವ

Vijayavani-Featured-Image
Published on

ಬೆಂಗಳೂರು: ಕರ್ನಾಟಕದಲ್ಲಿ ಜೇನುತುಪ್ಪವನ್ನು ಜನಪ್ರಿಯಗೊಳಿಸಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ‘ಝೇಂಕಾರ’ ಬ್ರ್ಯಾಂಡ್ ಹೆಸರನ್ನು ಮುನ್ನೆಲೆಗೆ ತಂದಿದೆ.

ಈ ಬ್ರ್ಯಾಂಡ್ ಹೆಸರಿನ ಜತೆಗೆ ಜೀವನೋಲ್ಲಾಸಕ್ಕೆ ಜೇನು ಎಂಬ ಟ್ಯಾಗ್‌ಲೈನ್ ನೀಡಿ ಲೋಗೋ ಮತ್ತು ಪ್ಯಾಕಿಂಗ್ ವಿನ್ಯಾಸ ಅಭಿವೃದ್ಧಿಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತ ಅನುಮೋದನೆ ಪಡೆಯಲಾಗಿದೆ. ತೋಟಗಾರಿಕಾ ಇಲಾಖೆಯೇ ಈ ಬ್ರ್ಯಾಂಡ್‌ನ ಮಾಲೀಕತ್ವವನ್ನು ಹೊಂದಿರುತ್ತದೆ. ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಸದರಿ ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಳಸಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಜಾಲತಾಣ ಅಥವಾ ಅಪರ ನಿರ್ದೇಶಕರು, ತಾಳೆಬೆಳೆ ವಿಭಾಗ, ತೋಟಗಾರಿಕೆ ನಿರ್ದೇಶನಾಲಯ, ಲಾಲ್ಬಾಗ್, ಬೆಂಗಳೂರು ಹಾಗೂ ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net