

ಹುಬ್ಬಳ್ಳಿ : ಇತ್ತೀಚೆಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾಧ್ಯಮಗಳ ಮೂಲಕ ಹಲಾಲ್ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಇದರಂತೆ ಈ ಹಲಾಲ್ ಮುಕ್ತ ದೀಪಾವಳಿಯಲ್ಲಿ ಪೂಜಾ ಸಾಮಾಗ್ರಿಗಳನ್ನು ಹಿಂದೂಗಳಿಂದಲೇ ಖರೀದಿಸಬೇಕು. ನಮ್ಮ ಹಣವನ್ನು ಮುಸ್ಲಿಮರು ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕಳೆದ ವಾರ ಹೇಳಿಕೆ ನೀಡಿದ್ದರು.
ಇಂದು ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಗಳಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನದ ವಿಚಾರವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಪ್ರಮೋದ್ ಮುತಾಲಿಕ್ ಹೇಳಿದ್ದಾರೆ ಎಂದ ಮಾತ್ರಕ್ಕೆ ಹಿಂದೂಗಳು ಮುಸ್ಲಿಮರ ಬಳಿ ಖರೀದಿಗೆ ಬರುವುದಿಲ್ಲವಾ? ನನ್ನೊಂದಿಗೆ ಬನ್ನಿ ನಾನು ತೋರಿಸುತ್ತೇನೆ. ಯಾವುದಾದರೂ ಮುಸ್ಲಿಮರು ತಮ್ಮ ಬಳಿ ಹಿಂದೂಗಳು ಖರೀದಿಗೆ ಬರುವುದಿಲ್ಲ ಎಂದು ಹೇಳಲಿ ನೋಡೋಣ. ನಾನು ನಮಾಜ್ ಮಾಡಿ ಬರುತ್ತೇನೆ. ನಡೀರಿ ಎಲ್ಲರೂ ಮುಸ್ಲಿಂ ಏರಿಯಾಗಳಿಗೆ ಹೋಗೋಣ. ಆ ರೀತಿ ಒಂದೇ ಒಂದು ಉದಾಹರಣೆಯನ್ನು ನೀವು ಕೊಟ್ಟರೂ ನಾನು ಇಡೀ ದಿನ ನಿಮ್ಮ ಜತೆಯೇ ಇರುತ್ತೇನೆ ಎಂದು ಶಾಸಕ ತಿಳಿಸಿದರು.
ಇನ್ನೂ ಇದರ ಕುರಿತಾಗಿ ಮಾತನಾಡಿದ ಜಮೀರ್, ದೀಪಾವಳಿಯಲ್ಲಿ ಮಾರಾಟವಾಗುವ ದೀಪಗಳನ್ನು ಹೆಚ್ಚಾಗಿ ಮುಸ್ಲಿಮರೇ ತಯಾರಿಸುತ್ತಾರೆ. ಹಿಂದೂಗಳು ಅದನ್ನು ಖರೀಸುತ್ತಾರೆ. ಆದರೆ ಈ ರೀತಿ ಹೇಳುವವರಿಗೆ ಹಿಂದೂಗಳೂ ಬೇಕಾಗಿಲ್ಲ. ಮುಸ್ಲಿಮರು ಕೂಡ ಬೇಕಾಗಿಲ್ಲ. ಖಾಲಿ ಅವರ ಬೆಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಮೊದಲು ಒಳ್ಳೆಯ ಕೆಲಸಗಳನ್ನು ಮಾಡಿ. ಎಲ್ಲರನ್ನೂ ಜೋಡಿಸೋದು. ಪ್ರೀತಿಯಿಂದ ಬಾಳುವುದನ್ನುಕಲಿಸಿಕೊಡಿ. ಅದು ಬಿಟ್ಟು ನೀವು ಮುಸ್ಲಿಮರ ಅಂಗಡಿಗಳಲ್ಲಿ ಹಿಂದೂಗಳು ತೆಗೆದುಕೊಳ್ಳಬಾರದು ಎಂದರೆ ಅದು ಆಗುವಂತ ಮಾತಾ? ಎಂದು ಪ್ರಶ್ನಿಸಿದ್ದಾರೆ.