ಬೆಂಬಲಿಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದು ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಗೈರಾದ ಜಮೀರ್ ಅಹ್ಮದ್!

Zameer-Ahmad-Khan
Published on

ಕೋಲಾರ: ಬೆಂಬಲಿಗನಿಗೆ ಟಿಕೆಟ್ ನೀಡದಕ್ಕೆ ಜಮೀರ್ ಅಹ್ಮದ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು ರಾಹುಲ್ ಗಾಂಧಿ ಹಾಜರಿರುವ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಶಾಸಕ ಅಖಂಡಗೆ ಟಿಕೆಟ್ ಹೊಲ್ಡ್ ಮಾಡಿರುವುದಕ್ಕೆ ಜಮೀರ್ ಅಹ್ಮದ್ ಅಸಮಧಾನ ವ್ಯಕ್ತಪಡಿಸಿದ್ದು ಕೋಲಾರ ಜೈ ಭಾರತ್ ಸಮಾವೇಶಕ್ಕೆ ಗೈರಾಗಿದ್ದಾರೆ. ಆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕೂಡ ಹಾಜರಿದ್ದರು.

ಈ ಮೂಲಕ ಹೈಕಮಾಂಡ್ ನಾಯಕರ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಖಂಡ ಪರವಾಗಿ ಜಮೀರ್ ಟಿಕೆಟ್ ಗೆ ಬ್ಯಾಟಿಂಗ್ ಮಾಡಿದ್ದು ಈಗಾಗಲೇ ಹಲವು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net