

ನವದೆಹಲಿ: ಬಂಧಿತ ಐಸಿಸ್ ಭಯೋತ್ಪಾದಕ ಅಬು ಯೂಸುಫ್ ಆಲಿಯಾಸ್ ಮುಸ್ತಕೀಂ ಖಾನ್ ಇಸ್ಲಾಮಿಕ್ ಧರ್ಮ ಬೋಧಕ ಝಾಕಿರ್ ನಾಯ್್ಕ ಭಾಷಣಗಳಿಂದ ಪ್ರಭಾವಿತನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಯ್್ಕ ಉಗ್ರ ಇಸ್ಲಾಮಿಕ್ ಭಾಷಣಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಅನೇಕ ಯುವಜನರು ಪ್ರಭಾವಿತರಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅತನ ಭಾಷಣದ ಪ್ರಭಾವದಿಂದ ಹಲವರು ಐಸಿಸ್ನಂಥ ಸಂಘಟನೆಗಳಿಗೆ ಸೇರುವ ಪ್ರೇರಣೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
2016ರಲ್ಲಿ ಭಾರತ ತೊರೆದ ನಾಯ್್ಕ ಮಲೇಷ್ಯಾಕ್ಕೆ ಹೋಗಿದ್ದ. ಅಲ್ಲಿ ಆತನಿಗೆ ಕಾಯಂ ಪೌರತ್ವ ನೀಡಲಾಗಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯವನಾದ ಯೂಸುಫ್ನನ್ನು ಕಳೆದ ಶುಕ್ರವಾರ ದೆಹಲಿಯಲ್ಲಿ ಬಂಧಿಸಲಾಯಿತು. ಅಯೋಧ್ಯೆ ಮತ್ತು ದೆಹಲಿಯಲ್ಲಿ ದಾಳಿ ನಡೆಸಲು ಯೋಜಿಸಿದ್ದ ಎಂಬ ಮಾಹಿತಿ ತಿಳಿದುಬಂತು. ಆತನ ಮನೆ ಮೇಲೆ ನಡೆಸಿದ ದಾಳಿ ವೇಳೆ ಅಪಾರ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ.