

ಶಿವಮೊಗ್ಗ: ಜಿಲ್ಲಾ ಬೇಡ ಜಂಗಮ ಸಮಾಜದಿಂದ ಪಂಚಾಚಾರ್ಯ ಯುಗಮಾನೋತ್ಸವ ಮತ್ತು ಶಿವದೀಕ್ಷೆ ಕಾರ್ಯಕ್ರಮ ಏಪ್ರಿಲ್ 14ರಂದು ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೇಡಜಂಗಮ ಸಮಾಜದ ರಾಷ್ಟ್ರೀಯ ಗೌರವಾಧ್ಯಕ್ಷ ಟಿ.ಬಿ.ಸೋಮಶೇಖರಯ್ಯ ತಿಳಿಸಿದರು.
ಉಚಿತವಾಗಿ ಶಿವದೀಕ್ಷೆ ಕಾರ್ಯವು ಕೋಣಂದೂರು ಕ್ಷೇತ್ರದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದೆ. ದೀಕ್ಷೆ ಕಾರ್ಯಕ್ಕೆ ಲಿಂಗಭೇದ ಮತ್ತು ವಯೋಮಿತಿ ಇರುವುದಿಲ್ಲ. ಶಿವದೀಕ್ಷೆಗೆ ಇಚ್ಚಿಸುವವರು ತಮ್ಮ ಪಾಲಕರೊಂದಿಗೆ ಕಡ್ಡಾಯವಾಗಿ ಬರತಕ್ಕದ್ದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಗಾಂಧಿಬಜಾರಿನ ಬಸವೇಶ್ವರ ದೇವಸ್ಥಾನದಿಂದ ಶ್ರೀ ಜಗದ್ಗುರು ಪಂಚಾಚಾರ್ಯ ಭಾವಚಿತ್ರ ಸಹಿತ ದೀಕ್ಷೆ ಪಡೆದ ವಟುಗಳೊಂದಿಗೆ ವೀರಶೈವ ಕಲ್ಯಾಣ ಮಂದಿರದವರಿಗೂ ಮೆರವಣಿಗೆ ನಡೆಯಲಿದೆ. ದೀಕ್ಷೆ ಮಾಡಿಸಿಕೊಳ್ಳುವವರು ಏ.7ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್(9901008178, 9901187099)ಗೆ ಸಂಪರ್ಕಿಸಬಹುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಪ್ರಮುಖರಾದ ಉಮೇಶ್ ಹಿರೇಮಠ್, ಲೋಕೇಶ್, ಎಂ.ವಿ.ಸುನಂದಾ, ಜ್ಯೋತಿ ನಾಗರಾಜಯ್ಯ, ಪ್ರೇಮಾ ವೀರಪ್ಪಯ್ಯ ಸುದ್ದಿಗೋಷ್ಠಿಯಲ್ಲಿದ್ದರು.