ಅಭಿಮಾನಿಗಳಿಗೊಸ್ಕರ ಪಿಎಚ್​​.ಡಿ ಅಧ್ಯಯನ ತೊರೆದ ಯೂಟ್ಯೂಬರ್​! ರಾತ್ರೋರಾತ್ರಿ ಖ್ಯಾತಿಗಳಿಸಿದ ಜಾರಾ ದಾರ್​ ಗೊತ್ತೇ? | Youtuber

dk (23) (1)
Published on

ಟೆಕ್ಸಾಸ್​: ಒಂದು ವಿಡಿಯೋದಿಂದ ರಾತ್ರೋರಾತ್ರಿ ಖ್ಯಾತಿಗಳಿಸಿದ ಯೂಟ್ಯೂಬರ್(Youtuber) ಟೆಕ್ಸಾಸ್​ ಮೂಲದ​ ಜಾರಾ ದಾರ್​ ಎನ್ನುವ ಮಹಿಳೆ. ನನ್ನ ಫ್ಯಾನ್ಸ್​ಗಳಿಗಾಗಿ ನಾನು ನನ್ನ ಪಿಎಚ್​.ಡಿ ಅಧ್ಯಯನವನ್ನು ಕೈಬಿಟ್ಟಿದ್ದೇನೆ ಎಂದು ಹೇಳಿದ್ದು, ಈಕೆಯ ವಿಡಿಯೋ ಮತ್ತು ಪೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿವೆ.

ಅಲ್ಲದೆ, ನನ್ನ ಅಭಿಮಾನಿಗಳಿಗೊಸ್ಕರ ಒಳ್ಳೆಯ ಕಂಟೆಟ್​ ಕ್ರಿಯೇಟರ್​ ಆಗಲು ಬಯಸಿದ್ದೇನೆ.ಹೀಗಾಗಿ, ನನ್ನ ಅಧ್ಯಯನವನ್ನು ಮೊಟಕುಗೊಳಿಸಿರುವೆ ಎಂದು ಹೇಳಿದ್ದಾಳೆ. ನನ್ನ ವ್ಯಯಕ್ತಿಕದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಕೆಲ ತಪ್ಪು ಸಂದೇಶಗಳು ಹರಿದಾಡುತ್ತೀವೆ ಎಂದು ಹೇಳಿರುವ ಅವರು ತಮ್ಮ ಬಗ್ಗೆ ಸ್ಪಷನೆ ಕೊಟ್ಟಿದ್ದಾರೆ.

ನಾನು ಪಾಕಿಸ್ತಾನಿ ಅಲ್ಲ..

ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಎಲ್ಲರೂ ನನ್ನನ್ನು ಪಾಕಿಸ್ತಾನಿ ಮಹಿಳೆ ಎಂದು ಹೇಳುತ್ತಿದ್ದಾರೆ. ಅದು ನಿಮ್ಮ ತಪ್ಪು ಗ್ರಹಿಕೆ. ನಾನು ಮೂಲತ ಅಮೆರಿಕಾನ್​ ಇಲ್ಲಿ ಹುಟ್ಟಿ ಇಲ್ಲೆ ಬೆಳೆದಿದ್ದೇನೆ. ನಮ್ಮ ತಂದೆ-ತಾಯಿ ಬೇರೆ ಬೇರೆ ದೇಶದವದರು. ಇಬ್ಬರೂ ಪಾಕಿಸ್ತಾನಕ್ಕೆ ಸಂಬಂಧಪಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಮೂಲ ಹೆಸರು ಡಾರ್ಸಿ ಎಂದು. ಅದನ್ನು ಸಂಕ್ಷಿಪ್ತಗೊಳಿಸಿದರೆ ಜಾರಾ ದಾರ್​ ಎಂದು ಆಗುತ್ತದೆ. ಜಾರಾ ದಾರ್ ಹೆಸರು ಕೇಳಿ ಎಲ್ಲರೂ ಪಾಕಿಸ್ತಾನಿ ಎಂದು ಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿ ಈಕೆಯ ವಿಡಿಯೋ ಮತ್ತು ಪೋಟೋಗಳು ವೈರಲ್​ ಆಗುತ್ತಿವೆ.

ತಾನು ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗವನ್ನು ತ್ಯಜಿಸುತ್ತಿದ್ದೇನೆ. ಆದರೆ, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಷಯದ ಕುರಿತು ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇನೆ ಎಂದ ಜಾರಾ ದಾರ್​, ಪೂರ್ಣಸಮಯ ಫ್ಯಾನ್ಸ್​ಗಾಗಿ ಕಳೆಯುವುದರಿಂದ ಹೊಸ ವಿಷಯವನ್ನು ಕಲಿಯಲು ಮತ್ತು ಹಂಚಿಕೊಳ್ಳಲು ಸ್ವಾತಂತ್ರ್ಯವನ್ನು ನೀಡಿದೆ ಎಂದು ವಿವರಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net