YouTuber Reveals ಅಪ್ಪನ ಕೊನೆಯ ಆಸೆ! ತಂದೆಯ ಶವ ಸುಟ್ಟ ಬೂದಿಯ ಮೇಲೆ ಗಾಂಜಾ ಗಿಡ ಬೆಳೆದ ಮಗಳು

YouTuber Reveals
Published on

 YouTuber Reveals : ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಲೈಕ್ ಮತ್ತು ಫೇಮಸ್​​​ಗಾಗಿ ಅನೇಕರು ವಿಚಿತ್ರ ಸಾಹಸ ಮಾಡುತ್ತಾರೆ. ಕೆಲವರು ರಾತ್ರೋರಾತ್ರಿ ದೊಡ್ಡ ಸ್ಟಾರ್ ಆಗುವ ಆಸೆಯಲ್ಲಿ ವಿಪರೀತಕ್ಕೆ ಹೋಗುತ್ತಾರೆ. ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಯಾನಕ ಸಾಹಸಗಳನ್ನು ಮಾಡುತ್ತಿದ್ದರೆ, ಇನ್ನು ಕೆಲವರು ತಮ್ಮ ಪ್ರಾಣವನ್ನೇ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ.

ಮಹಿಳೆಯೊಬ್ಬಳು ತನ್ನ ತಂದೆ ತೀರಿಕೊಂಡಾಗ ಅವರ ದೇಹವನ್ನು ಸುಟ್ಟು ಹಾಕಿದ ಬೂದಿಯಯನ್ನು ತಂದು ಅದರ ಮೇಲೆ ಗಾಂಜಾ ಗಿಡ ನೆಟ್ಟು ಗಾಂಜಾ ಎಲೆಯಿಂದ ಸಿಗರೇಟು ಸೇದಿದ್ದು ಇಲ್ಲಿನ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗಿದೆ.

ಅಮೆರಿಕಾದ ಯೂಟ್ಯೂಬರ್ ಆಗಿರುವ ರೊಸಾನ್ನಾ ಪ್ಯಾನ್ಸಿನೊ ಅವರು ತಮ್ಮ ರಾಡಿಕ್ಯುಲಸ್ ಪಾಡ್‌ಕ್ಯಾಸ್ಟ್‌ನ ಮೊದಲ ಸಂಚಿಕೆಯಲ್ಲಿ ತಮ್ಮ ದಿವಂಗತ ತಂದೆಗೆ ವಿಶೇಷ ಗೌರವ ಸಲ್ಲಿಸಿದ್ದಾಗಿ ಹೇಳಿರುವ ವಿಡಿಯೋ ಸಖತ್​ ವೈರಲ್​​ ಆಗುತ್ತಿದೆ.

14.6 ಮಿಲಿಯನ್‌ಗಿಂತಲೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ 39 ವರ್ಷದ ಇಂಟರ್ನೆಟ್ ತಾರೆ ಮತ್ತು ಯೂಟ್ಯೂಬರ್ ರೋಸನ್ನಾ ಪ್ಯಾನ್ಸಿನೊ ಅವರು ತಮ್ಮ ತಂದೆಯ ಚಿತಾಭಸ್ಮವನ್ನು ಬಳಸಿ ಬೆಳೆದ ಗಾಂಜಾದಿಂದ ತಯಾರಿಸಿದ ಸಿಗರೇಟನ್ನು  ಸೇಯುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು ಎಂದು ಹೇಳುತ್ತಾರೆ. "ಸ್ಮೋಕಿಂಗ್ ಮೈ ಡೆಡ್ ಡ್ಯಾಡ್" ಎಂಬ ಶೀರ್ಷಿಕೆಯ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ನವೆಂಬರ್ 17 ರಂದು ವೀಡಿಯೊ ಪ್ರಸಾರವಾಯಿತು.

ಲ್ಯುಕೇಮಿಯಾದೊಂದಿಗೆ ಆರು ವರ್ಷಗಳ ಹೋರಾಟದ ನಂತರ ತನ್ನ ತಂದೆ ಐದು ವರ್ಷಗಳ ಹಿಂದೆ ನಿಧನರಾದರು . ಸಾಯುವ ಮೊದಲು ಇದು ತನ್ನ ತಂದೆಯ ಅಸಾಮಾನ್ಯ ಆಸೆ ಹೇಳಿಕೊಂಡಿದ್ದಾರೆ. ಗಾಂಜಾ ಗಿಡವನ್ನು ಬೆಳೆಯಲು ತನ್ನ ಚಿತಾಭಸ್ಮವನ್ನು ಬಳಸುವಂತೆ ಅವರು ಕೇಳಿಕೊಂಡರು. ತನ್ನ ತಂದೆಯ ಕೋರಿಕೆಯ ಮೇರೆಗೆ ಇದನ್ನು ಮಾಡಿದ್ದೇನೆ ಎಂದು ರೋಸನ್ನಾ ಬಹಿರಂಗಪಡಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net