

ರಾಯ್ಪುರ: ಭೀಕರ ಅಪಘಾತವೊಂದರಲ್ಲಿ ಪ್ರಸಿದ್ಧ ಯೂಟ್ಯೂಬರ್, ಹಾಸ್ಯನಟ ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ರಾಯಪುರ್ ಬಳಿಯ ಲಭಂಡಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಕೆಂಪೇಗೌಡ ಜಯಂತಿ: ಡಿಕೆಶಿ, ಅಶ್ವತ್ಥ್ ನಾರಾಯಣ್ಗೆ ಕಿವಿಮಾತು ಹೇಳಿದ ಶ್ರೀ ನಿರ್ಮಲಾನಂದ ಸ್ವಾಮೀಜಿ
ದೇವರಾಜ್ ಪಟೇಲ್(22) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು, ಅತಿವೇಗವಾಗಿ ಬಂದ ಟ್ರಕ್ಗೆ ಆತನ ಬೈಕ್ಗೆ ಡಿಕ್ಕಿಯಾಗಿ ತಲೆ ಮತ್ತು ದೇಹಕ್ಕೆ ತೀವ್ರವಾದ ಗಾಯಗಳಾಗಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಕೂಡ ಅಷ್ಟರಲ್ಲಿ ಆತ ಮೃತಪಟ್ಟಿದ್ದಾರೆ.
ಭುವನ್ ಬಾಮ್ರ ವೆಬ್ ಸೀರೀಸ್ 'ದಿಂಧೋರಾ'ದಲ್ಲಿ ನಟಿಸಿದ್ದ ದೇವರಾಜ್, ಈ ಹಿಂದೆ ದಿಲ್ ಸೆ ಬುರಾ ಲಗ್ತಾ ಹೈ ಭಾಯ್ ಎಂಬ ಸಂಭಾಷಣೆ ರಾತ್ರೊ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಖ್ಯಾತಿಯನ್ನು ಗಳಿಸಿದ್ದರು.
ಇದನ್ನೂ ಓದಿ: ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ಜಾಗತಿಕ ಕ್ರಿಕೆಟ್ ಟೂರ್ನಿ ವಿವರ…
ದೇವರಾಜ್ ಪಟೇಲ್ ಯಾರು?
ಛತ್ತೀಸ್ಗಢದ ಮಹಾಸಮುಂಡ್ ಜಿಲ್ಲೆಯ ಬಾಗ್ಬಹರಾದ 22 ವರ್ಷದ ಯೂಟ್ಯೂಬರ್ ದೇವರಾಜ್ ಪಟೇಲ್, ತಮ್ಮ ಹಾಸ್ಯ ಪ್ರವೃತ್ತಿಯಿಂದ ರಾಜ್ಯದಲ್ಲಿ ವ್ಯಾಪಕ ಹೆಸರುಗಳಿಸಿದ್ದ. ಯೂಟ್ಯೂಬ್ ಚಾನೆಲ್ನಲ್ಲಿ 3 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಆತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು.
ಸಿಎಂ ಬಘೇಲ್ ಈತನ ಸಾವಿಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಕಳೆದ ವರ್ಷ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಹಾಸಮುಂಡ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರಾಜ್ನೊಂದಿಗೆ ಚಿತ್ರೀಕರಿಸಿದ ಕಿರು ವೀಡಿಯೊವನ್ನು ಸಿಎಂ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡು ಇಬ್ಬರ ನಡುವಿನ ಸಂವಾದವನ್ನು ನೆನಪಿಸಿಕೊಂಡಿದ್ದಾರೆ. ಜತೆಗೆ ಈತ ಛತ್ತೀಸ್ಗಢ ಸರ್ಕಾರದ ಆತ್ಮಾನಂದ ಶಾಲೆಯ ಜಾಹೀರಾತು ಅಭಿಯಾನದ ಕುರಿತು ಕಿರು ವೀಡಿಯೊವನ್ನು ಸಹ ಮಾಡಿದ್ದರು.(ಏಜೆನ್ಸೀಸ್)