ಜೀವ ಉಳಿಸಿದ ಯುಟ್ಯೂಬ್ ವಿಡಿಯೋ

YOUTUBE
Published on

ಸಾಮಾನ್ಯವಾಗಿ ಸ್ಮಾರ್ಟ್​ಫೋನ್ ಬಳಸುವ ಮಕ್ಕಳು ಯುಟ್ಯೂಬ್ ನೋಡುವುದು ಹೊಸದೇನಲ್ಲ. ಅಮೆರಿಕದ ಒಂಬತ್ತು ವರ್ಷದ ಬಾಲಕನೊಬ್ಬ ತನ್ನ ಸಹೋದರನ ಪ್ರಾಣವನ್ನು ಕಾಪಾಡುವುದರಲ್ಲಿ ಯುಟ್ಯೂಬ್ ವಿಡಿಯೋ ಮುಖ್ಯ ಪಾತ್ರ ವಹಿಸಿದೆ.

ಬಾಲಕ ಪುಟ್ಟ ಸಹೋದರನ ಜತೆ ಆಟವಾಡುತ್ತಿದ್ದ. ಇದ್ದಕ್ಕಿದ್ದಂತೆ ಆ ಸಹೋದರನಿಗೆ ಉಸಿರುಗಟ್ಟತೊಡಗಿತು. ಆ ಲಕ್ಷಣವನ್ನು ಗಮನಿಸಿದ ಬಾಲಕನಿಗೆ ಈ ಮೊದಲೊಮ್ಮೆ ನೋಡಿದ್ದ ಯುಟ್ಯೂಬ್ ವಿಡಿಯೋ ನೆನಪಾಯಿತು.

ತಕ್ಷಣ ಸಹೋದರನ ಹೊಟ್ಟೆಯನ್ನು ಹಿಂಬದಿಯಿಂದ ಬಿಗಿಯಾಗಿ ಹಿಡಿದ ಬಾಲಕ ಬೆನ್ನಿನ ತುಸು ಮೇಲ್ಭಾಗದಲ್ಲಿ ಹಾಗೂ ಕುತ್ತಿಗೆಗಿಂತ ತುಸುವೇ ಕೆಳಭಾಗದಲ್ಲಿ ಗುದ್ದಿದ. ಇದರಿಂದ ಉಸಿರಾಟ ಸರಾಗವಾಗಿ ಪ್ರಾಣ ಉಳಿಯಿತು. ಬಾಲಕನ ಸಮಯಪ್ರಜ್ಞೆಯನ್ನು ಎಲ್ಲರೂ ಪ್ರಶಂಸಿಸಿದ್ದು, ಯುಟ್ಯೂಬ್ ಸಿಇಒ ಸೂಸನ್ ವೋಜ್​ಸ್ಕಿ ಈ ಸುದ್ದಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net