‘ನನಗೆ ನಿನ್ನ ಗಿಫ್ಟ್ ಬೇಡ’ ಅಂದಿದ್ದಕ್ಕೆ ಕಪಾಳಕ್ಕೆ ಬಾರಿಸಿದ ಆಸಾಮಿ: ರಸ್ತೆಯಲ್ಲೇ ವಿದ್ಯಾರ್ಥಿನಿಗೆ ಕಿರುಕುಳ | Man Slaps Student

 UP Man Slaps Student
ಗಿಫ್ಟ್ ಬೇಡ ಅಂದಿದ್ದಕ್ಕೆ ರಸ್ತೆಯಲ್ಲೇ ಕೆನ್ನೆಗೆ ಬಾರಿಸಿದ ಯುವಕ
Published on: 
Summary

ರಸ್ತೆಯಲ್ಲೇ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ರೋಡ್ ರೋಮಿಯೋ

ಯುವಕನ ಗಿಫ್ಟ್ ಬೇಡ ಎಂದು ಚರಂಡಿಗೆ ಎಸೆದ ಕಾಲೇಜು ವಿದ್ಯಾರ್ಥಿನಿ

ವಿದ್ಯಾರ್ಥಿನಿ ಕುಟುಂಬದ ದೂರಿನಡಿ ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು

Muzaffarnagar Incident: ತಾನು ತಂದಿದ್ದ ಗಿಫ್ಟ್ ಬೇಡ ಅಂದಿದ್ದಕ್ಕೆ, ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ರಸ್ತೆಯಲ್ಲೇ ಯುವಕನೊಬ್ಬ ಕೆನ್ನೆಗೆ ಬಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಿಸಿಟಿವಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.

ಉತ್ತರ ಪ್ರದೇಶದ ಮುಜಫರ್‌ನಗರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಕೇತ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾಲೇಜು ಮುಗಿಸಿ ಮನೆಗೆ ಬರ್ತಿದ್ದ ವಿದ್ಯಾರ್ಥಿನಿಯ ದಾರಿ ತಡೆದ ಫರ್ಮನ್ ಅಲಿ ಅನ್ನೋ ಯುವಕ, ಕೈಯಲ್ಲಿ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಆಕೆಗೆ ಕೊಡೋಕೆ ಹೋಗಿದ್ದಾನೆ.

ಗಿಫ್ಟ್ ಚರಂಡಿಗೆ ಎಸೆದ ವಿದ್ಯಾರ್ಥಿನಿ

ಆದ್ರೆ ವಿದ್ಯಾರ್ಥಿನಿ ಉಡುಗೊರೆ ತೆಗೆದುಕೊಳ್ಳಲು ಒಪ್ಪದೇ, ಬ್ಯಾಗ್ ಅನ್ನು ಪಕ್ಕದಲ್ಲಿದ್ದ ಚರಂಡಿಗೆ ಎಸೆದಿದ್ದಾಳೆ. ಇದರಿಂದ ಕೋಪಗೊಂಡ ಆತ, ರಸ್ತೆಯಲ್ಲೇ ಆ ಹುಡುಗಿಗೆ ಸತತವಾಗಿ ಕೆನ್ನೆಗೆ ಬಾರಿಸಿ, ಬೈದಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಂಡ

ಆರೋಪಿ ಫರ್ಮನ್ ಆ ವಿದ್ಯಾರ್ಥಿನಿಗೆ ಹಲವು ದಿನಗಳಿಂದ ಪ್ರೀತಿಸುವಂತೆ ಟಾರ್ಚರ್ ಕೊಡುತ್ತಿದ್ದ. ಘಟನೆ ನಡೆದ ದಿನ ದಾರಿಯಲ್ಲಿ ತಡೆದು ಗಿಫ್ಟ್ ಕೊಡಲು ಯತ್ನಿಸಿದ್ದಾನೆ. ಹುಡುಗಿಗೆ ನಿಂದಿಸಿ, ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಪೊಲೀಸ್ ಠಾಣೆಗೆ ನುಗ್ಗಿ SI ಕುರ್ಚಿಯಲ್ಲೇ ಕುಳಿತ ಕುಡುಕ: ಫೈಲ್ ಹರಿದು ರಂಪಾಟ! Drunk Man Sits SI Chair

ಸಿಸಿಟಿವಿ ವಿಡಿಯೋ ವೈರಲ್

ಹಲ್ಲೆ ಮಾಡುವ ದೃಶ್ಯ, ಹತ್ತಿರದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನವೆಂಬರ್ 2ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)​