ಪೊಲೀಸ್ ಠಾಣೆಗೆ ನುಗ್ಗಿ SI ಕುರ್ಚಿಯಲ್ಲೇ ಕುಳಿತ ಕುಡುಕ: ಫೈಲ್ ಹರಿದು ರಂಪಾಟ! Drunk Man Sits SI Chair

Drunk Man Sits on SI Chair
ಪೊಲೀಸ್ ಟೋಪಿ ಧರಿಸಿ ಎಸ್‌ಐ ಸೀಟಲ್ಲಿ ಕುಳಿತ ಕುಡುಕ
Published on: 
Summary

ಸಿಬ್ಬಂದಿ ಇಲ್ಲದ ವೇಳೆ ಠಾಣೆಗೆ ನುಗ್ಗಿ ಎಸ್‌ಐ ಕುರ್ಚಿಯಲ್ಲಿ ಕುಳಿತ ಕುಡುಕ

ಸರ್ಕಾರಿ ಫೈಲ್ ಹರಿದು, ಠಾಣೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿದ ಆರೋಪಿ

ಠಾಣೆಗೆ ಸಿಬ್ಬಂದಿಯ ಬೇಜವಾಬ್ದಾರಿಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ

Uttar Pradesh Police: ಪೊಲೀಸ್ ಠಾಣೆ ಅಂದ್ರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದು ರೀತಿಯ ಭಯ, ಗೌರವ ಎರಡೂ ಇರುತ್ತೆ. ಆದ್ರೆ ಉತ್ತರ ಪ್ರದೇಶದಲ್ಲಿ ಕುಡುಕನೊಬ್ಬ ಪೊಲೀಸ್ ಠಾಣೆಗೇ ನುಗ್ಗಿ, ಸ್ವತಃ ಎಸ್‌ಐ ಕುರ್ಚಿಯಲ್ಲೇ ರಾಜನ ತರ ಕುಳಿತು ರಂಪಾಟ ಮಾಡಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ದೊಯಾಮಿ ಪೊಲೀಸ್ ಚೌಕಿಯಲ್ಲಿ ಈ ಘಟನೆ ಸಂಭವಿಸಿದೆ. ಅಧಿಕಾರಿಗಳು ತುರ್ತು ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಠಾಣೆ ಖಾಲಿಯಿರುವುದನ್ನು ಗಮನಿಸಿದ ರಾಹುಲ್ ಸಿಂಗ್ (30) ಎಂಬ ವ್ಯಕ್ತಿ, ಶರ್ಟ್ ಇಲ್ಲದೆಯೇ ಇನ್-ಚಾರ್ಜ್ ಕೊಠಡಿಗೆ ನುಗ್ಗಿದ್ದಾನೆ. ಅಲ್ಲಿ ಮೇಜಿನ ಮೇಲಿದ್ದ ಪೋಲೀಸ್ ಕ್ಯಾಪ್ ಧರಿಸಿ, ಎಸ್‌ಐ ಕುರ್ಚಿಯಲ್ಲೇ ಕುಳಿತು ರಂಪಾಟ ಪ್ರಾರಂಭಿಸಿದ್ದಾನೆ..

ಫೈಲ್ ಹರಿದು 'ಆನ್ ದಿ ಸ್ಪಾಟ್' ತೀರ್ಪು

ಕುರ್ಚಿಯಲ್ಲಿ ಕುಳಿತ ಆತ ಮೇಜನ್ನು ಕುಟ್ಟುತ್ತಾ, ಅಲ್ಲಿದ್ದ ಪ್ರಮುಖ ಸರ್ಕಾರಿ ಫೈಲ್‌ಗಳನ್ನು ಪರಿಶೀಲಿಸುವಂತೆ ನಾಟಕ ಮಾಡಿದ್ದಾನೆ. ಕೆಲ ಕಾಗದಪತ್ರಗಳಿಗೆ ಸಹಿ ಹಾಕಿ, ಇನ್ನು ಕೆಲವು ಪ್ರಮುಖ ದಾಖಲೆಗಳನ್ನು ಹರಿದು ಹಾಕಿದ್ದಾನೆ. ಅಷ್ಟೇ ಅಲ್ಲದೆ, ಜೋರಾಗಿ ‘ಫೈಸಲಾ ಆನ್ ದಿ ಸ್ಪಾಟ್ ಹೋಗಾ’ (ಸ್ಥಳದಲ್ಲೇ ತೀರ್ಪು ನೀಡಲಾಗುವುದು) ಎಂದು ಕೂಗಾಡಿದ್ದಾನೆ.

ವಿಡಿಯೋ ಮಾಡುತ್ತಿದ್ದವರ ಮೇಲೆ

ಕೊಠಡಿಯ ಒಳಗಿನಿಂದ ಬಾಗಿಲು ಹಾಕಿಕೊಂಡ ಆತ, ಹೊರಠಾಣೆಯ ಗ್ಲಾಸ್ ಡೋರ್‌ಗಳು, ಕುರ್ಚಿ-ಬೆಂಚುಗಳು ಮತ್ತು ಹೂವಿನ ಕುಂಡಗಳನ್ನು ಒಡೆದು ಹಾಕಿದ್ದಾನೆ. ಹೊರಗಿನಿಂದ ಸಾರ್ವಜನಿಕರು ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಯತ್ನಿಸಿದಾಗ, ಅವರ ಮೇಲೆಯೇ ಪೇಪರ್ ವೇಟ್ ಎಸೆದು ಹಲ್ಲೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ: ದನಗಳು ಮೆಲಕು ಹಾಕೋದರ ಹಿಂದಿದೆ ಪ್ರಕೃತಿಯ ಮಾಸ್ಟರ್ ಪ್ಲಾನ್: ಹಸುವಿಗೆ ಒಂದಲ್ಲ, ನಾಲ್ಕು ಹೊಟ್ಟೆ ಇರುತ್ತೆ ಗೊತ್ತಾ? | Cow digestion

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಆತನನ್ನು ವಶಕ್ಕೆ ಪಡೆದರು. ಗಾಯಗೊಂಡಿದ್ದ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಸರ್ಕಾರಿ ಆಸ್ತಿ ನಾಶ ಮತ್ತು ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್‌ಐಆರ್ ದಾಖಲಿಸಿ ಜೈಲಿಗಟ್ಟಿದ್ದಾರೆ. ಠಾಣೆಯನ್ನು ಖಾಲಿ ಬಿಟ್ಟು ಹೋದ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧವೂ ಈಗ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.