ಸಹಾಯದ ನೆಪದಲ್ಲಿ ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ 10 ಲಕ್ಷ ರೂ. ವಂಚನೆ: ಯುವಕ ಅರೆಸ್ಟ್​

Accused Subir
Published on

ಕೊಲ್ಲಂ: ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಸುಬೀರ್​ ಎಂದು ಗುರುತಿಸಲಾಗಿದೆ. ಈತ ಪೂತಕ್ಕುಳಂ ಪರವೂರ್​ ಮೂಲದ ನಿವಾಸಿ.

ಪ್ರಕರಣವೊಂದರಲ್ಲಿ ಬಂಧಿಯಾಗಿರುವ ಪತಿಯನ್ನು ಬಿಡುಗಡೆ ಮಾಡಲು ಗರ್ಭಿಣಿಗೆ ಸಹಾಯ ಮಾಡುವುದಾಗಿ ಆರೋಪಿ ಸುಬೀರ್​ ಮುಂದೆ ಬಂದನು. ಆತನನ್ನು ಸಂತ್ರಸ್ತ ಗರ್ಭಿಣಿ ನಂಬಿದ್ದಳು. ಆದರೆ, ಆಕೆಯ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಸುಬೀರ್​ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ತೆಗೆದುಕೊಂಡು, ಅತ್ಯಾಚಾರದ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಸಂತ್ರಸ್ತೆ ಜತೆ ಆತ್ಮೀಯತೆ ಬೆಳೆಸಿಕೊಂಡ ಆರೋಪಿ ಸುಬೀರ್​, ಸೇವಾ ಸಹಕಾರಿ ಬ್ಯಾಂಕ್​ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಗೊಮ್ಮೆ ಈಗೊಮ್ಮೆ 10 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಉದ್ಯೋಗ ಸಂದರ್ಶನದ ನೆಪದಲ್ಲಿ ಆಕೆಯನ್ನು ಎರ್ನಾಕುಲಂನ ಹೋಟೆಲ್‌ಗೆ ಕರೆದೊಯ್ದು ಆಕೆ ಗರ್ಭಿಣಿ ಎಂದು ತಿಳಿದಿದ್ದರೂ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net