

ನಾಗ್ಪುರ್: ಸುಮಾರು ಮೂರು ಕಿಲೋ ಗಾಂಜಾ ಸಹಿತ ಯುವಕನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಬಳಿ ನಡೆದಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿದ್ದ ಹೆಂಡತಿ, ಮನೆಯವರ ಮೇಲೆ ವಿಷ ಪ್ರಯೋಗ: ಲಂಡನ್ನಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್ ಮಾಡಿದ ಪತಿ..!
ಆರೋಪಿಯನ್ನು ವಿಜಯಸಾಯಿ ರಮೇಶ್ ಮೆರುಗುಮಲ (39) ಎಂದು ಗುರುತಿಸಲಾಗಿದ್ದು. ಈತ ಆಂಧ್ರಪ್ರದೇಶದ ಗುಧಿವಾಡ ನಿವಾಸಿಯಾಗಿದ್ದಾನೆ. ಮಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಂಗಾಬಾಯಿ ಟಕ್ಲಿ ಪ್ರದೇಶದ ಝೆಂಡಾ ಚೌಕ್‌ನಲ್ಲಿ ಶನಿವಾರದಂದು ಸಂಜೆ ಗಸ್ತು ತಿರುಗುತ್ತಿದ್ದಾಗ ಪೊಲೀಸರಿಗೆ ವಿಜಯಸಾಯಿ ಮೇಲೆ ಅನುಮಾನ ಬಂದಿದೆ.
ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಕಾಲೇಜು ಬ್ಯಾಗ್‌ನಲ್ಲಿ 3 ಕೆಜಿ 90 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರ ಬೆಲೆ ಸುಮಾರು 46 ಸಾವಿರ ಎಂದು ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಯಿಂದ ಮೊಬೈಲ್, ಬ್ಯಾಗ್, ನಗದು ಸೇರಿದಂತೆ ಒಟ್ಟು 56,980 ರೂ. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್)