ಬಿಜೆಪಿ ಸಮಾವೇಶ ಮುಗಿಸಿ ಮನೆಗೆ ಮರಳುವಾಗ ಅಪಘಾತ: ಓರ್ವ ಸಾವು, ಏಳು ಮಂದಿಗೆ ಗಾಯ

Amit Shah
Published on

ಚಿಕ್ಕೋಡಿ: ನಿನ್ನೆ (ಮೇ. 6) ಬಿಜೆಪಿ ಸಮಾವೇಶ ಮುಗಿಸಿ ಮನೆಗೆ ಮರಳುವಾಗ ಸಂಭವಿಸಿದ ಅಪಘಾತದಲ್ಲಿ ಯುವಕನೊರ್ವ ಮೃತಪಟ್ಟಿದ್ದು, 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶನಿವಾರ (ಮೇ.6) ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಪರ ಅಮಿತ್​ ಷಾ ಪ್ರಚಾರಕ್ಕೆಂದು ಅಥಣಿಗೆ ಆಗಮಿಸಿದ್ದರು. ಸಮಾವೇಶಕ್ಕೆ ಕೊಟ್ಟಲಗಿಯಿಂದ ಬಂದಿದ್ದ ಕೆಲವರು ಅಥಣಿಯಿಂದ ವಾಪಸ್​ ಮನೆಗೆ ಕ್ರೂಸರ್‌ನಲ್ಲಿ ತೆರಳುವಾಗ ಕೊಟ್ಟಲಗಿ - ಕಕಮರಿ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ ಹೊಡೆದಿದೆ.

ಅಪಘಾತದಲ್ಲಿ ಕೊಟ್ಟಲಗಿ ಗ್ರಾಮದ ಶಿವಪುತ್ರ ರಾಮು ಬಂಡರಬಟ್ಟಿ (20) ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗಾಯಾಳುಗಳಾದ ಬಸು ಸಿದ್ದಪ್ಪ ಗುಂಡಗೇರಿ, ದುಂಡಪ್ಪ ಗುಂಡಗೇರಿ, ರಾಜು ಸಿದ್ದರಾಯ ಬಂಡರಬೇಟಿ, ಅಭಿಷೇಕ ಸಿಂಧೂರ ಎಂಬುವರನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಐಗಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net