ವಯಸ್ಸಾಯ್ತು ಮದುವೆ ಆಗಿಲ್ಲ ಅಂತ ಮನನೊಂದು ಪ್ರಾಣಬಿಟ್ಟ ಲೇಡಿ ಕಾನ್ಸ್​ಟೆಬಲ್​

Hyd Constable
Published on

ಹೈದರಾಬಾದ್​: ವಯಸ್ಸಾದರೂ ಮದುವೆ ಆಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಮನನೊಂದು ಮಹಿಳಾ ಕಾನ್ಸ್​ಟೆಬಲ್ ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ಬುಧವಾರ ನಡೆದಿದೆ.

ಸುರೇಖಾ (28) ಮೃತ ಲೇಡಿ ಕಾನ್ಸ್​ಟೆಬಲ್. ಈಕೆ ತೆಲಂಗಾಣದ ಕಂದಕುರ ಮಂಡಲದ ಜೈತವರಮ್​ ಗ್ರಾಮದ ನಿವಾಸಿ. ಹೈದರಾಬಾದ್​ನ ಛತ್ರಿನಕ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಸಾಲಿಬಂದ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಶಮ್ಶಿರಾಗಂಜ್​ ಕಾಲ್ವಗಡ್ಡದಲ್ಲಿ ತನ್ನ ಅಕ್ಕನ ಮನೆಯಲ್ಲಿ ಸುರೇಖಾ ವಾಸವಿದ್ದಳು.

ಜಾತಕ ಸರಿಯಿಲ್ಲ

ಸುರೇಖಾ 2018ನೇ ಬ್ಯಾಚಿನ ಕಾನ್ಸ್​ಟೆಬಲ್​. ಛತ್ರಿನಕ ಪೊಲೀಸ್​ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥ ಮುರಿಬಿದ್ದಿತ್ತು. ಇಬ್ಬರ ಜಾತಕ ಸರಿಯಿಲ್ಲ ಅಂತ ಮದುವೆ ರದ್ದಾಗಿತ್ತು. ತನ್ನ ಮದುವೆ ಎಂದಿಗೂ ನಡೆಯುವುದಿಲ್ಲ ಎಂದು ಸುರೇಖಾ ಮನನೊಂದಿದ್ದಳು.

ಈ ತಿಂಗಳ 2ನೇ ತಾರೀಖಿನಂದು ಸುರೇಖಾ ಅವರ ಅಕ್ಕ ಕೆಲಸಕ್ಕೆ ಹೋಗಿ 3ನೇ ತಾರೀಖಿನಂದು ಬೆಳಗ್ಗೆ 11 ಗಂಟೆಗೆ ಮನೆ ಬಂದರು. ಈ ವೇಳೆ ಮನೆಯ ಬಾಗಿಲು ಒಳಗಡೆಯಿಂದ ಲಾಕ್​ ಆಗಿತ್ತು. ಎಷ್ಟೇ ಬಡಿದರೂ ತೆಗೆಯದಿದ್ದಾಗ ಅನುಮಾನ ಬಂದು ಅಕ್ಕಪಕ್ಕದವರನ್ನು ಕರೆದರು. ಬಳಿಕ ಬಾಗಿಲು ಮುರಿದು ನೋಡಿದಾಗ ಒಳಗಡೆ ಸುರೇಖಾ ನೇಣಿಗೆ ಶರಣಾಗಿದ್ದಳು.

ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಸುರೇಖಾ ಮೃತದೇಹವನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಯೆ ಶವಗಾರಕ್ಕೆ ಸ್ಥಳಾಂತರಿಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net